ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 9ನೇ ಬಾರಿ ಐತಿಹಾಸಿಕ ಬಜೆಟ್ ಮಂಡಿಸಿದ್ದಾರೆ. ದೇಶದ ಸರ್ವಾಂಗೀಣ ಅಭಿವೃದ್ಧಿ ಒಳಗೊಂಡ ಬಜೆಟ್ ಇದಾಗಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಘೋಷಣೆಯಂತೆ ಬಜೆಟ್ ಎಲ್ಲರಿಗೂ ಹತ್ತಿರವಾಗಿದೆ. ಈ ಬಜೆಟ್ ನೋಡಿದರೆ ಭಾರತದ ಸಾರ್ವಭೌಮತ್ವ ಎತ್ತಿಹಿಡಿಯುವಲ್ಲಿ ಸಫಲವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, 53.5 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಲಾಗಿದೆ. ದೇಶದ ಪುರಾತನ ಸ್ಥಳಗಳನ್ನು ಅಭಿವೃದ್ಧಿಗೊಳಿಸಲು ಈ ಬಜೆಟ್ ಹೆಚ್ಚು ಮಹತ್ವ ನೀಡಿದೆ. ಕರ್ನಾಟಕಕ್ಕೆ ರೈಲ್ವೆ ಸ್ಟೇಷನ್ ಕಾರಿಡಾರ್ ಘೋಷಣೆ ಮಾಡಲಾಗಿದೆ. ಕಳೆದ 10 ವರ್ಷಗಳಿಂದ ದೇಶದಲ್ಲಿ 25 ಕೋಟಿ ಜನರು ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ. ರೈತರ ಆದಾಯ ದ್ವಿಗುಣಕ್ಕೆ ಒತ್ತು ನೀಡಲಾಗಿದೆ ಎಂದರು.
ಇನ್ನು 500 ಜಲಾಶಯಗಳು ಮತ್ತು ಅಮೃತ್ ಸರೋವರಗಳ ಸಮಗ್ರ ಅಭಿವೃದ್ಧಿ ಮೂಲಕ ಮೀನುಗಾರಿಕೆ ಕ್ಷೇತ್ರವನ್ನು ಬಲಪಡಿಸುವುದು, ಪಶುಸಂಗೋಪನೆ ಕ್ಷೇತ್ರದಲ್ಲಿ ಉದ್ಯಮಶೀಲನೆ ಅಭಿವೃದ್ಧಿ ಮೂಲಕ ಉದ್ಯೋಗಾವಕಾಶ ಒದಗಿಸುವುದು, ತೆಂಗು ಬೆಳೆಗೆ ಪ್ರೋತ್ಸಾಹ ಯೋಜನೆಯಡಿ ತೆಂಗು ಉತ್ಪಾದನೆ ಹೆಚ್ಚಳ ಹಾಗೂ 1 ಕೋಟಿ ರೈತರು ಸೇರಿ 3 ಕೋಟಿ ಜನರಿಗೆ ನೆರವು ನೀಡುವುದು, ಭಾರತೀಯ ಗೋಡಂಬಿ ಮತ್ತೊ ಕೋಕೋವನ್ನು 2030ರ ವೇಳೆ ಪ್ರೀಮಿಯಂ ಗ್ಲೋಬಲ್ ಬ್ರ್ಯಾಂಡ್ ಆಗಿ ರೂಪಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದಿದ್ದಾರೆ.



