February 1, 2026
Sunday, February 1, 2026
spot_img

Union Budget 2026: ಬಜೆಟ್‌ನಲ್ಲಿ ನೆರೆ ರಾಷ್ಟ್ರಗಳಿಗೆ ನೆರವು ಘೋಷಣೆ: 8,792 ಕೋಟಿ ಮೀಸಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

2026-27ರ ಕೇಂದ್ರ ಬಜೆಟ್‌ನಲ್ಲಿ ಭಾರತವು ನೆರೆ ರಾಷ್ಟ್ರಗಳು ಮತ್ತು ವಿವಿಧ ದೇಶಗಳಿಗೆ ಒಟ್ಟು 8,792.32 ಕೋಟಿ ಬಾಹ್ಯ ನೆರವು ನೀಡಲು ಯೋಜನೆ ಮಾಡಿದೆ. ಇದರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ 6,997 ಕೋಟಿ ಅನುದಾನ ರೂಪದಲ್ಲಿ ಹಾಗೂ 519.92 ಕೋಟಿ ಸಾಲ ರೂಪದಲ್ಲಿ ಒದಗಿಸಲಾಗುತ್ತಿದೆ.

ಭಾರತವು ಸಹಾಯ ನೀಡುವ ಪ್ರಮುಖ ದೇಶಗಳಲ್ಲಿ ಭೂತಾನ್, ನೇಪಾಳ, ಮಾಲ್ಡೀವ್ಸ್, ಅಫ್ಘಾನಿಸ್ತಾನ ಮತ್ತು ಮಯನ್ಮಾರ್ ಸೇರಿವೆ. ಭೂತಾನ್‌ಗೆ ಈ ಬಾರಿ 2,288 ಕೋಟಿ ಮೀಸಲಾಗಿದೆ. ಅಂತಾರಾಷ್ಟ್ರೀಯ ಸಾಂಸ್ಕೃತಿ, ಪರಂಪರಾ ಯೋಜನೆಗಳು ಮತ್ತು ತರಬೇತಿ ಕಾರ್ಯಕ್ರಮಗಳಿಗೆ ಸುಮಾರು 1,300 ಕೋಟಿ ಮೀಸಲಾಗಿದೆ.

ಹಣಕಾಸು ಸಚಿವಾಲಯದ ಬಾಹ್ಯ ನೆರವು 1,794.76 ಕೋಟಿ ಅಂದಾಜಾಗಿದೆ. ಇದರಲ್ಲಿಯೇ ಇಂಡಿಯನ್ ಡೆವಲಪ್ಮೆಂಟ್ ಅಂಡ್ ಎಕನಾಮಿಕ್ ಅಸಿಸ್ಟೆನ್ಸ್ ಸ್ಕೀಮ್ ಮೂಲಕ 1,675.18 ಕೋಟಿ ಬಿಡುಗಡೆಯಾಗಲಿದೆ.

2026-27ರಲ್ಲಿ ಬಿಡುಗಡೆಯಾದ ಪ್ರಮುಖ ಸಹಾಯ ಹೀಗಿದೆ:

ಅಫ್ಘಾನಿಸ್ತಾನ 150 ಕೋಟಿ, ಬಾಂಗ್ಲಾದೇಶ 60 ಕೋಟಿ, ಶ್ರೀಲಂಕಾ 400 ಕೋಟಿ, ಮಾಲ್ಡೀವ್ಸ್ 550 ಕೋಟಿ, ಮಾರಿಷಸ್ 550 ಕೋಟಿ, ಹಾಗೂ ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ 80-225 ಕೋಟಿ. ಆದರೆ, ಇರಾನ್‌ನ ಛಾಬಹಾರ್ ಬಂದರು ಅಭಿವೃದ್ಧಿಗೆ 400 ಕೋಟಿ ಸಹಾಯವನ್ನು ಸದ್ಯ ಹಿಂಪಡೆಯಲಾಗಿದೆ. ಈ ನಿರ್ಧಾರ ಯುದ್ಧ ಪರಿಸ್ಥಿತಿಯ ಕಾರಣದಿಂದ ತೆಗೆದುಕೊಂಡಿರಬಹುದು ಎನ್ನಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !