ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಡರ್19 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಹಲವು ದಾಖಲೆಗಳು ಪುಡಿ ಮಾಡಿದ್ದಾರೆ.
14ರ ಹರೆಯದ ವೈಭವ್ ಸೂರ್ಯವಂಶಿ, ಪಾಕ್ ವಿರುದ್ಧ ಮಿಂಚಿನ ಆಟವಾಡಿ ಶುಬಮನ್ ಗಿಲ್ ಮತ್ತು ಉನ್ಮುಕ್ತ್ ಚಾಂದ್ ಅವರ ದಾಖಲೆಗಳನ್ನು ಮುರಿದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ವೈಭವ್ 22 ಎಸೆತಗಳಲ್ಲಿ 30 ರನ್ ಗಳಿಸಿ ನಿರ್ಗಮಿಸಿದರು. ಈ ಸಮಯದಲ್ಲಿ ಅವರು 136.36 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು ಮತ್ತು ಐದು ಬೌಂಡರಿಗಳು ಮತ್ತು ಒಂದು ಸಿಕ್ಸ್ ಬಾರಿಸಿದರು. ಬಹುಬೇಗ ವಿಕೆಟ್ ಕಳೆದುಕೊಂಡರು ಈ ಯುವ ಬ್ಯಾಟ್ಸ್‌ಮನ್ ಏಕಕಾಲದಲ್ಲಿ ಶುಭಮನ್ ಗಿಲ್ ಮತ್ತು ಉನ್ಮುಕ್ತ್ ಚಂದ್ ಅವರ ದಾಖಲೆಗಳನ್ನು ಮುರಿದಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ವೈಭವ್ ಈ ಇಬ್ಬರ ದಾಖಲೆ ಮುರಿದಿದ್ದಾರೆ. ಇಲ್ಲಿಯವರೆಗೆ, ವೈಭವ್ ಸೂರ್ಯವಂಶಿ 23 ಏಕದಿನ ಪಂದ್ಯಗಳಲ್ಲಿ 50.82ರ ಸರಾಸರಿಯಲ್ಲಿ 1169 ರನ್ ಗಳಿಸಿದ್ದಾರೆ, ಇದರಲ್ಲಿ 3 ಶತಕಗಳು ಮತ್ತು 6 ಅರ್ಧಶತಕಗಳು ಸೇರಿವೆ. ಯೂತ್ ಏಕದಿನ ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ ಅವರ ಅತ್ಯಧಿಕ ಸ್ಕೋರ್ 171 ಆಗಿದೆ. ಗಿಲ್ ಮತ್ತು ಉನ್ಮುಕ್ತ್ ಹಿಂದಿಕ್ಕಲು ಸೂರ್ಯವಂಶಿಗೆ 11 ರನ್‌ಗಳು ಬೇಕಾಗಿದ್ದವು. ಅವರು 11 ರನ್‌ಗಳ ಗಡಿ ದಾಟಿದ ತಕ್ಷಣ, ಅವರು ಗಿಲ್ ಅವರನ್ನು ಹಿಂದಿಕ್ಕಿದರು. ವೈಭವ್ ಈಗ ಯೂತ್ ಏಕದಿನ ಪಂದ್ಯಗಳಲ್ಲಿ ಗಿಲ್‌ಗಿಂತ ಹೆಚ್ಚಿನ ರನ್ ಕಲೆಹಾಕಿದ್ದಾರೆ.
ಯೂತ್ ಏಕದಿನ ಪಂದ್ಯಗಳಲ್ಲಿ ಶುಭಮನ್ ಗಿಲ್ ಅವರು 16 ಪಂದ್ಯಗಳ 15 ಇನ್ನಿಂಗ್ಸ್‌ಗಳಲ್ಲಿ 104.45ರ ಸರಾಸರಿಯಲ್ಲಿ 1149 ರನ್ ಗಳಿಸಿದ್ದಾರೆ. ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 160 ಆಗಿದೆ. ಸದ್ಯ ಯೂತ್ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರ ಪಟ್ಟಿಯಲ್ಲಿ ವೈಭವ್ ನಾಲ್ಕನೇ ಸ್ಥಾನ ತಲುಪಿದ್ದಾರೆ. 36 ಪಂದ್ಯಗಳಲ್ಲಿ 1,404 ರನ್ ಗಳಿಸಿರುವ ವಿಜಯ್ ಜೋಲ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.



