March 22, 2026
Sunday, March 22, 2026
spot_img

ಅಂಡರ್‌-19 ವಿಶ್ವಕಪ್‌: ಪಾಕ್ ಗೆ ಹೀನಾಯ ಸೋಲು, ಸೆಮಿಫೈನಲ್ಸ್‌ಗೆ ಎಂಟ್ರಿಕೊಟ್ಟ ಭಾರತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಅಂಡರ್‌-19 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಕಿರಿಯರ ತಂಡ, ಪಾಕ್ ವಿರುದ್ಧ ಗೆದ್ದು ಸೆಮಿಫೈನಲ್ಸ್‌ಗೆ ಅರ್ಹತೆ ಪಡೆದಿದೆ.

ಭಾನುವಾರ ನಡೆದಿದ್ದ ಸೂಪರ್‌-6ರ ಎರಡನೇ ಗುಂಪಿನ ಪಂದ್ಯದಲ್ಲಿ ಕಾನಿಷ್ಕ್‌ ಚೌವ್ಹಾಣ್‌ ಅವರ ಆಲ್‌ರೌಂಡರ್‌ ಆಟದ ಬಲದಿಂದ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 58 ರನ್‌ಗಳಿಂದ ಮಣಿಸಿತು. ಆ ಮೂಲಕ ಅಂತಿಮ ನಾಲ್ಕರ ಘಟ್ಟಕ್ಕೆ ಅಧಿಕೃತವಾಗಿ ಪ್ರವೇಶ ಮಾಡಿತು.

ಫಬ್ರವರಿ 4 ರಂದು ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ ತಂಡ ಕಾದಾಟ ನಡೆಸಲಿದೆ.

ಭಾರತ ನೀಡಿದ್ದ 253 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಪಾಕಿಸ್ತಾನ ತಂಡ, ಖಲಿನ್‌ ಪಟೇಲ್‌ ಹಾಗೂ ಆಯುಷ್‌ ಮ್ಹಾತ್ರೆ ಸ್ಪಿನ್‌ ಮೋಡಿಗೆ ನಲುಗಿದ ಪಾಕಿಸ್ತಾನ ತಂಡ, 46.2 ಓವರ್‌ಗಳಿಗೆ 194 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ದೊಡ್ಡ ಅಂತರದಲ್ಲಿ ಸೋಲುವ ಮೂಲಕ ಅಂಡರ್‌-19 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ರೇಸ್‌ನಿಂದ ಅಧಿಕೃತವಾಗಿ ಹೊರ ನಡೆಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !