ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ಸಂಬಲ್ಪುರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಪರೂಪದ ಅನುಭವ ಎದುರಾಯಿತು. ಸಂಬಲ್ಪುರ–ನಾಂದೇಡ್ ಎಕ್ಸ್‌ಪ್ರೆಸ್ ರೈಲು ತನ್ನ ನಿಗದಿತ ವೇಳಾಪಟ್ಟಿಯಂತೆ ನಿಲ್ದಾಣಕ್ಕೆ ಬಂದರೂ, ಟಿಕೆಟ್‌ನಲ್ಲಿ ಉಲ್ಲೇಖಿಸಿದ್ದ ಎಸಿ–3 ಟೈರ್ ಕೋಚ್ ಸಂಪೂರ್ಣವಾಗಿ ಕಾಣೆಯಾಗಿತ್ತು. ಒಂದು ಸೀಟಲ್ಲ, ಸಂಪೂರ್ಣ ಬೋಗಿಯೇ ಇಲ್ಲದೆ ರೈಲು ಬಂದಿರುವುದನ್ನು ಕಂಡು ಪ್ರಯಾಣಿಕರು ಗೊಂದಲಕ್ಕೊಳಗಾದರು.
ರೈಲು ಸಂಖ್ಯೆ 20809ರಲ್ಲಿ ಪ್ರಯಾಣಿಸಲು ಸುಮಾರು 57 ಪ್ರಯಾಣಿಕರು ಎಸಿ ಕೋಚ್‌ಗೆ ದೃಢೀಕೃತ ಟಿಕೆಟ್ ಹೊಂದಿದ್ದರು. ಆದರೆ ಕೋಚ್ ಜೋಡಿಸದೇ ರೈಲು ಸಂಬಲ್ಪುರಕ್ಕೆ ತಲುಪಿದ್ದರಿಂದ ಅವರು ಪ್ಲಾಟ್‌ಫಾರ್ಮ್‌ನಲ್ಲೇ ನಿಂತುಕೊಳ್ಳಬೇಕಾದ ಸ್ಥಿತಿ ಉಂಟಾಯಿತು. ವಿಷಯ ತಿಳಿದ ರೈಲ್ವೆ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ಲಭ್ಯವಿದ್ದ ಇತರ ಬೋಗಿಗಳ ಖಾಲಿ ಬರ್ತ್‌ಗಳಲ್ಲಿ ಪ್ರಯಾಣಿಕರಿಗೆ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿದರು.
ಇದನ್ನೂ ಓದಿ:
ಈ ಕುರಿತು ಸ್ಪಷ್ಟನೆ ನೀಡಿದ ರೈಲ್ವೆ ಇಲಾಖೆ, ತಾಂತ್ರಿಕ ದೋಷದಿಂದ ಕಾಯ್ದಿರಿಸಿದ್ದ ಎಸಿ ಕೋಚ್ ಅನ್ನು ಆರಂಭಿಕ ಹಂತದಲ್ಲೇ ರೈಲಿಗೆ ಜೋಡಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದೆ. ನಂತರ ವಿಶಾಖಪಟ್ಟಣಂ ನಿಲ್ದಾಣದಲ್ಲಿ ಹೊಸ ಎಸಿ ಕೋಚ್ ಅನ್ನು ರೈಲಿಗೆ ಸೇರಿಸಲಾಗಿದೆ.



