September 27, 2026
Sunday, September 27, 2026
spot_img

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಅಂಧರ ಮಹಿಳಾ ವಿಶ್ವಕಪ್ ವಿಜೇತ ತಂಡ ಭೇಟಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್: :

ಉಡುಪಿ ಶ್ರೀ ಕೃಷ್ಣ ಮಠಕ್ಕೆ ವಿಶ್ವ ಕಪ್ ಗೆದ್ದ ಟಿ-೨೦ ಅಂಧರ ಮಹಿಳಾ ಕ್ರಿಕೆಟ್ ತಂಡದ ಸದಸ್ಯೆಯರು ಭೇಟಿ ನೀಡಿದರು.

ಕನಕ ಕಿಂಡಿಯ ಮೂಲಕ ಕ್ರೀಡಾಳುಗಳು ಶ್ರೀ ಕೃಷ್ಣನ ದರುಶನ ಪಡೆದರು .ಪರ್ಯಾಯ ಶ್ರೀ ಶಿರೂರು ಮಠದ ವೇದವರ್ಧನ ತೀರ್ಥರಿಂದ ಗೌರವಾರ್ಪಣೆ ಮಾಡಿ ಮಂತ್ರಾಕ್ಷತೆ ಹಾಗೂ ಸಾಧನೆ ತೋರಿದ ಮಹಿಳೆಯರಿಗೆ ಶ್ರೀಗಳು ಅಭಿನಂದಿಸಿದರು.

ತಂಡದ ಸದಸ್ಯೆಯರ ಜೊತೆ ಸಮಾಲೋಚನೆ ನಡೆಸಿದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸಹ ವಿಜೇತ ತಂಡಕ್ಕೆ ಶುಭ ಹಾರೈಸಿದರು. ಬಳಿಕ ಕೃಷ್ಣಮಠದಲ್ಲಿ ಪ್ರಸಾದ ಸ್ವೀಕರಿಸಿ ಮಣಿಪಾಲಕ್ಕೆ ತಂಡದವರು ತೆರಳಿದರು. ನಾಳೆ ನಡೆಯಲಿರುವ ಮಣಿಪಾಲ್ ಮೇರಥಾನ್ ನಲ್ಲಿ ಭಾಗಿಯಾಗಲಿದ್ದಾರೆ.

Must Read