February 8, 2026
Sunday, February 8, 2026
spot_img

Do You Know | ಆಹಾರ ತಿನ್ನದೆ, ನೀರು ಕುಡಿಯದೆ ಮನುಷ್ಯ ಎಷ್ಟು ದಿನ ಬದುಕಬಲ್ಲ?

ಮಾನವನ ದೇಹ ಅತ್ಯಂತ ಅದ್ಭುತವಾಗಿ ನಿರ್ಮಾಣಗೊಂಡಿದೆ. ಈ ಅದ್ಭುತ ರಚನೆಯ ಬಗ್ಗೆ ಕೆಲವೊಮ್ಮೆ ಪ್ರಶೆಗಳು ಬರುವುದುಂಟು. ಊಟ ಮಾಡದೇ, ನೀರು ಕುಡಿಯದೇ ಮನುಷ್ಯ ಎಷ್ಟು ದಿನ ಬದುಕಬಹುದು?” ಅನ್ನೋದು. ಈ ಪ್ರಶ್ನೆಗೆ ಸರಳ ಉತ್ತರ ಇಲ್ಲ, ಏಕೆಂದರೆ ಇದು ವ್ಯಕ್ತಿಯ ಆರೋಗ್ಯ, ವಯಸ್ಸು ಮತ್ತು ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೂ ದೇಹದ ಸಾಮರ್ಥ್ಯಕ್ಕೆ ಕೆಲವು ಮಿತಿಗಳು ಇವೆ.

ಸಾಮಾನ್ಯವಾಗಿ ಮನುಷ್ಯ ನೀರು ಕುಡಿಯದೇ 3 ರಿಂದ 5 ದಿನಗಳವರೆಗೆ ಮಾತ್ರ ಬದುಕಬಲ್ಲನು ಎಂದು ಹೇಳಲಾಗುತ್ತದೆ. ದೇಹದಲ್ಲಿ ನೀರಿನ ಕೊರತೆ ಉಂಟಾದರೆ ಅಂಗಾಂಗಗಳ ಕಾರ್ಯಕ್ಷಮತೆ ನಿಧಾನವಾಗಿ ಕುಸಿಯುತ್ತದೆ.

ಆಹಾರ ಇಲ್ಲದೆ ಮನುಷ್ಯ ಕೆಲವೊಮ್ಮೆ 2 ರಿಂದ 4 ವಾರಗಳವರೆಗೆ ಬದುಕಬಲ್ಲ. ದೇಹದಲ್ಲಿರುವ ಶಕ್ತಿಯನ್ನು ನಿಧಾನವಾಗಿ ಬಳಸಿಕೊಂಡು ಕೆಲ ದಿನಗಳನ್ನು ಸಾಗಿಸಬಹುದು. ಆದರೆ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ.

ದೇಹದ ಶಕ್ತಿಯ ಬಳಕೆ
ಮೊದಲಿಗೆ ದೇಹದಲ್ಲಿರುವ ಗ್ಲೂಕೋಸ್ ಬಳಕೆ ಆಗುತ್ತದೆ. ನಂತರ ಕೊಬ್ಬು ಮತ್ತು ಕೊನೆಗೆ ಸ್ನಾಯುಗಳನ್ನು ದೇಹ ಶಕ್ತಿಯಾಗಿ ಬಳಸಲು ಆರಂಭಿಸುತ್ತದೆ. ಇದರಿಂದ ದೇಹ ದುರ್ಬಲವಾಗುತ್ತದೆ.

ಆರೋಗ್ಯ ಮತ್ತು ಪರಿಸ್ಥಿತಿ ಮುಖ್ಯ
ಹವಾಮಾನ, ವಯಸ್ಸು, ಆರೋಗ್ಯ ಸ್ಥಿತಿ ಇವುಗಳೆಲ್ಲಾ ಬದುಕುವ ಅವಧಿಯನ್ನು ನಿರ್ಧರಿಸುತ್ತವೆ. ಬಿಸಿಲು ಹೆಚ್ಚು ಇದ್ದರೆ ನೀರಿಲ್ಲದೆ ಹೆಚ್ಚು ದಿನ ತಡೆಯಲು ಸಾಧ್ಯವಾಗುವುದಿಲ್ಲ.

ಆಹಾರಕ್ಕಿಂತಲೂ ನೀರು ಜೀವಕ್ಕೆ ಬಹಳ ಮುಖ್ಯ. ದೇಹ ಸರಿಯಾಗಿ ಕೆಲಸ ಮಾಡಲು ನೀರು ಅಗತ್ಯ. ಆದ್ದರಿಂದ ಪ್ರತಿದಿನ ಸಾಕಷ್ಟು ನೀರು ಕುಡಿಯುವುದು ಅತ್ಯವಶ್ಯಕ.

ಒಟ್ಟಿನಲ್ಲಿ, ಮನುಷ್ಯ ಕೆಲ ದಿನಗಳು ಆಹಾರವಿಲ್ಲದೆ ಬದುಕಬಹುದು, ಆದರೆ ನೀರಿಲ್ಲದೆ ಹೆಚ್ಚು ದಿನ ತಡೆಯಲು ಸಾಧ್ಯವಿಲ್ಲ. ದೇಹದ ಆರೈಕೆಗೆ ಸರಿಯಾದ ಆಹಾರ ಮತ್ತು ನೀರು ಎರಡೂ ಸಮಾನವಾಗಿ ಮುಖ್ಯ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !