ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೆಡೆ ಟಿ20 ವಿಶ್ವಕಪ್ ಶುರುವಾಗಿ ಪಂದ್ಯಗಳು ನಡೆಯುತ್ತಿದ್ದರೆ.,ಇತ್ತ ಪಾಕಿಸ್ತಾನಕ್ಕೆ ಐಸಿಸಿ ಹೊಡೆತ ಮೇಲೆ ಒಂದು ಹೊಡೆತ ನೀಡುತ್ತಿದೆ.
ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ವಿಚಾರ ICC, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿಗಳ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಇಲ್ಲಿ ಬಾಂಗ್ಲಾದೇಶಕ್ಕೆ ಯಾವುದೇ ರೀತಿಯಲ್ಲಿ ಶಿಕ್ಷೆ ಆಗಲ್ಲ. ಅಲ್ಲದೆ ಐಸಿಸಿ ಆದಾಯದ ಪಾಲು ಸಿಗುತ್ತದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ.
ಬಾಂಗ್ಲಾದೇಶವನ್ನು ಪ್ರಸ್ತುತ ವಿಶ್ವಕಪ್‌ನಿಂದ ಹೊರಗಿಡಲಾಗಿದ್ದರೂ, ಅದು ಯಾವುದೇ ಆರ್ಥಿಕ ನಷ್ಟವನ್ನು ಅನುಭವಿಸುವುದಿಲ್ಲ. ಕಳೆದ ವರ್ಷ ದೇಶದಲ್ಲಿ ನಡೆದ ಗಲಭೆಗಳಿಂದಾಗಿ ಪಂದ್ಯಾವಳಿಯನ್ನು ಬಾಂಗ್ಲಾದೇಶದಿಂದ ದುಬೈಗೆ ಸ್ಥಳಾಂತರಿಸಿದ ಕಾರಣ ಬಾಂಗ್ಲಾದೇಶವು ಮಹಿಳಾ ಟಿ20 ವಿಶ್ವಕಪ್ ಅನ್ನು ಆಯೋಜಿಸುವುದರಿಂದ ವಂಚಿತವಾಗಿದೆ ಎಂದು ಐಸಿಸಿ ಒಪ್ಪಿಕೊಂಡಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಋತುವಿನಲ್ಲಿ ಪ್ರಮುಖ ಪಂದ್ಯಾವಳಿಯ ಆತಿಥ್ಯ ವಹಿಸುವ ಹಕ್ಕುಗಳನ್ನು ಬಾಂಗ್ಲಾದೇಶಕ್ಕೆ ನೀಡಲು ಐಸಿಸಿ ಈಗ ಪರಿಗಣಿಸುತ್ತಿದೆ.
ಪಾಕಿಸ್ತಾನದ ಬೇಡಿಕೆಗೆ ಐಸಿಸಿ ತಿರಸ್ಕಾರ
ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಜೊತೆ ದ್ವಿಪಕ್ಷೀಯ ಕ್ರಿಕೆಟ್ ಆಡಲು ಭಾರತವನ್ನು ಒತ್ತಾಯಿಸಬೇಕು ಎಂದು ಪಾಕ್ ಐಸಿಸಿಗೆ ಮನವಿ ಮಾಡಿತ್ತು. ಐಸಿಸಿ ಈ ಬೇಡಿಕೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ.
ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ತ್ರಿಕೋನ ಸರಣಿಯನ್ನು ನಡೆಸಲು ಪ್ರಸ್ತಾಪವನ್ನು ಮಾಡಲಾಗಿತ್ತು. ಅದನ್ನು ತಿರಸ್ಕರಿಸಲಾಯಿತು. ಈ ವರ್ಷ ಭಾರತದ ಬಾಂಗ್ಲಾದೇಶ ಪ್ರವಾಸದ ವಿಷಯವೂ ಸಭೆಯಲ್ಲಿ ಪ್ರಸ್ತಾಪವಾಯಿತು. ಯಾವುದೇ ದೇಶವನ್ನು ಬೇರೆ ದೇಶಕ್ಕೆ ಪ್ರವಾಸ ಮಾಡುವಂತೆ ಒತ್ತಾಯಿಸುವ ಅಧಿಕಾರವಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ.
ಲಾಹೋರ್‌ನಲ್ಲಿ ನಡೆದ ಸುದೀರ್ಘ ಸಭೆಯ ನಂತರ, ಫೆಬ್ರವರಿ 15ರಂದು ಭಾರತದ ವಿರುದ್ಧದ ಪಂದ್ಯದ ಬಗ್ಗೆ ಪಾಕಿಸ್ತಾನ ತಕ್ಷಣದ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಈ ವಿಷಯದ ಬಗ್ಗೆ ಪ್ರಧಾನಿ ಶಹಬಾಜ್ ಷರೀಫ್ ಅವರೊಂದಿಗೆ ಸಮಾಲೋಚಿಸಲು ಬಯಸಿರುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ನಖ್ವಿ ಹೇಳಿದ್ದಾರೆ. ಇದರ ನಂತರ, ಐಸಿಸಿ ಪಾಕಿಸ್ತಾನಕ್ಕೆ ಒಂದು ದಿನದ ಸಮಯವನ್ನು ನೀಡಿತು. ಮೂಲಗಳ ಪ್ರಕಾರ, ಭಾರತ-ಪಾಕಿಸ್ತಾನ ಪಂದ್ಯದ ಕುರಿತು ಯಾವುದೇ ಸಮಯದಲ್ಲಿ ಅಂತಿಮ ನಿರ್ಧಾರ ಪ್ರಕಟವಾಗಬಹುದು.



