February 10, 2026
Tuesday, February 10, 2026
spot_img

Mahashivratri | ಮಹಾಶಿವರಾತ್ರಿ ಉಪವಾಸ ಮಾಡೋದು ಹೇಗೆ? ಏನು ತಿನ್ಬೇಕು? ಏನು ತಿನ್ಬಾರ್ದು?

ಮಹಾಶಿವರಾತ್ರಿ ದಿನ ಶಿವನ ಭಕ್ತರು ಉಪವಾಸವಿದ್ದು ಪೂಜೆ ಮಾಡುವುದನ್ನು ಬಹಳ ಪವಿತ್ರವಾಗಿ ನೋಡಲಾಗುತ್ತದೆ. ಈ ದಿನ ಉಪವಾಸವು ಕೇವಲ ಊಟ ಬಿಡೋದಷ್ಟೇ ಅಲ್ಲ, ಮನಸ್ಸು ಮತ್ತು ದೇಹವನ್ನು ಶುದ್ಧವಾಗಿಟ್ಟುಕೊಳ್ಳುವ ಆಚರಣೆ. ಕೆಲವರು ಸಂಪೂರ್ಣ ನಿರ್ಜಲ ಉಪವಾಸ ಇಡ್ತಾರೆ, ಇನ್ನೂ ಕೆಲವರು ಫಲಾಹಾರ ಮಾಡಿ ದಿನವನ್ನ ಕಳೆಯುತ್ತಾರೆ. ಆರೋಗ್ಯಕ್ಕೆ ತಕ್ಕಂತೆ ಉಪವಾಸ ಮಾಡುವುದೇ ಮುಖ್ಯ.

ಉಪವಾಸ ಹೇಗೆ ಮಾಡಬೇಕು?

  • ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಶಿವನ ಪೂಜೆ ಮಾಡಿ
  • ದಿನವಿಡೀ ಶಿವನ ನಾಮಸ್ಮರಣೆ, ಭಜನೆ ಅಥವಾ ಧ್ಯಾನದಲ್ಲಿ ಕಾಲ ಕಳೆಯಿರಿ
  • ರಾತ್ರಿ ಜಾಗರಣೆ ಮಾಡಿ ಶಿವನ ಆರಾಧನೆ ಮಾಡುವುದು ವಿಶೇಷ

ಏನು ತಿನ್ಬೇಕು? (ಫಲಾಹಾರ)

  • ಹಣ್ಣುಗಳು – ಬಾಳೆಹಣ್ಣು, ಸೇಬು, ದ್ರಾಕ್ಷಿ
  • ಹಾಲು, ಮೊಸರು, ಪನ್ನೀರ್
  • ಸಬ್ಬಕ್ಕಿ (ಸಬ್ಬಕ್ಕಿ ಖಿಚ್ಡಿ ಅಥವಾ ಪಾಯಸ)
  • ಕಡಲೆಕಾಯಿ, ಬಾದಾಮಿ, ಕಾಜು
  • ಆಲೂಗಡ್ಡೆ ಪದಾರ್ಥಗಳು (ಉಪ್ಪಿಲ್ಲದೆ ಅಥವಾ ಸಾದಾ)

ಏನು ತಿನ್ಬಾರ್ದು?

  • ಅಕ್ಕಿ, ಗೋಧಿ, ರೊಟ್ಟಿ, ಸಾಮಾನ್ಯ ಅನ್ನ
  • ಬೇಳೆ ಪದಾರ್ಥಗಳು
  • ಈರುಳ್ಳಿ, ಬೆಳ್ಳುಳ್ಳಿ ಇರುವ ಊಟ
  • ಮದ್ಯ, ತಂಬಾಕು, ಜಂಕ್ ಫುಡ್

ಪ್ರತಿಯೊಬ್ಬರೂ ತಮ್ಮ ಆರೋಗ್ಯ ಮತ್ತು ಶಕ್ತಿಗೆ ತಕ್ಕಂತೆ ಉಪವಾಸ ಆಯ್ಕೆ ಮಾಡಬಹುದು. ಭಕ್ತಿ, ಶ್ರದ್ಧೆ ಮತ್ತು ಶುದ್ಧ ಮನಸ್ಸಿನಿಂದ ಶಿವನನ್ನು ನೆನೆಯುವುದೇ ಮಹಾಶಿವರಾತ್ರಿಯ ನಿಜವಾದ ಅರ್ಥ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !