Friday, November 7, 2025

SHOCKING | ಕಸದಲ್ಲಿ ಮನುಷ್ಯದ ತಲೆಬುರುಡೆ, ಮೂಳೆಗಳು ನೋಡಿ ಬೆಚ್ಚಿಬಿದ್ದ ಜನ, ರಿಯಾಲಿಟಿ ಬೇರೆನೇ ಇದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಎಲೆಕ್ಟ್ರಾನಿಕ್ ಸಿಟಿ ಸಮೀಪದ ಗೋವಿಂದಶೆಟ್ಟಿಪಾಳ್ಯದಲ್ಲಿ ಕಸದ ರಾಶಿಯಲ್ಲಿ ಮನುಷ್ಯನ ಮೂಳೆಗಳು ಪತ್ತೆಯಾಗಿವೆ. ಗಣೇಶ ದೇವಸ್ಥಾನದ ಬಳಿ ಮನುಷ್ಯನ ಮೂಳೆಗಳು ಪತ್ತೆ ಆಗಿರುವುದು ಸ್ಥಳೀಯರು ಆತಂಕಗೊಂಡಿದ್ದಾರೆ.

ಕೂಡಲೇ ವಿಷಯ ತಿಳಿಸಿದು ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರ ಭೇಟಿ ಪರಿಶೀಲಿಸಿದ್ದು, ಬಳಿಕ ವ್ಯಕ್ತಿಯೋರ್ವ ತನ್ನ ಮೆಡಿಕಲ್ ಓದುತ್ತಿರುವ ಮಗಳಿಗಾಗಿ ಈ ಮೂಳೆಗಳನ್ನು ತಂದು ಬಳಿಕ ಬಿಸಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಭಯಗೊಂಡಿದ್ದ ಜನರು ನಿಟ್ಟುಸಿರುಬಿಟ್ಟಿದ್ದಾರೆ.

ಪೊಲೀಸರು ಮೂಳೆಗಳನ್ನು ಪರಿಶೀಲನೆ ಮಾಡುತ್ತಿರುವಾಗ ಮೆಡಿಕಲ್ ಓದುತ್ತಿದ್ದ ವಿದ್ಯಾರ್ಥಿನಿಯ ತಂದೆಯ ಎಡವಟ್ಟು ಬೆಳಕಿಗೆ ಬಂದಿದೆ. ಪೊಲೀಸರು ಬಂದ ಬಳಿಕ ತಪ್ಪೊಪ್ಪಿಕೊಂಡಿದ್ದು, ಮೂಳೆಗಳನ್ನು ತಾನೇ ತಂದು ಹಾಕಿರುವುದಾಗಿ ಹೇಳಿದ್ದಾನೆ. ಮೆಡಿಕಲ್ ಓದುತ್ತಿದ್ದ ಮಗಳ ವಿದ್ಯಾಭ್ಯಾಸಕ್ಕಾಗಿ ಮೂಳೆಗಳನ್ನು ಮನೆಗೆ ತಂದಿದ್ದ. ಅವಶ್ಯಕತೆ ಇಲ್ಲದೆ ಕೆಲ ದಿನಗಳಿಂದ ಮನೆಯಲ್ಲೇ ಇಟ್ಟಿದ್ದರು. ಆದ್ರೆ, ಗೌರಿ ಹಬ್ಬ ಹಿನ್ನೆಲೆ ಮನೆ ಸ್ವಚ್ಛಗೊಳಿಸುವ ಸಂಬಂಧ ಮೂಳೆಗಳನ್ನು ತಂದು ಕಸ ಹಾಕುವ ಜಾಗದಲ್ಲಿ ಬಿಸಾಡಿದ್ದಾರೆ. ಇದೀಗ ತಾನೇ ತಂದು ಬಿಸಾಡಿರುವುದಾಗಿ ವ್ಯಕ್ತಿಯೋರ್ವ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು, ಸ್ಥಳೀಯರ ಆತಂಕ ದೂರವಾದಂತಾಗಿದೆ.

error: Content is protected !!