ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಹೊಸ ಕಚೇರಿಯಾದ ಸೇವಾ ತೀರ್ಥವನ್ನು ಲೋಕಾರ್ಪಣೆಗೊಳಿಸಿದ್ದು, ಇದರ ಬೆನ್ನಲ್ಲೇ ಮೊದಲ ನಿರ್ಧಾರ ತೆಗೆದುಕೊಂಡಿದ್ದಾರೆ.
ಇಂದು ಪ್ರಧಾನಿ ಮೋದಿ ಸಹಿ ಹಾಕಿದ 4 ನಿರ್ಧಾರಗಳು ರೈತರು, ಮಹಿಳೆಯರು, ಯುವಕರ ಮೇಲೆ ಕೇಂದ್ರೀಕೃತವಾಗಿದೆ. ಇಂದು ಮೋದಿ ರಾಹತ್ ಯೋಜನೆಯನ್ನು ಪ್ರಾರಂಭಿಸಲು ಅನುಮೋದನೆ ನೀಡಿದರು, ಲಖಪತಿ ದೀದಿಯ ಯೋಜನೆಯ ಮಿತಿಯನ್ನು ದ್ವಿಗುಣಗೊಳಿಸಿದರು ಮತ್ತು ಕೃಷಿ ಮೂಲಸೌಕರ್ಯ ನಿಧಿಯ ವೆಚ್ಚವನ್ನು ಹೆಚ್ಚಿಸಿದರು.
ಸರ್ಕಾರವು ‘ಭಾರತದ ಆಡಳಿತ ವಾಸ್ತುಶಿಲ್ಪದಲ್ಲಿ ಪರಿವರ್ತನಾತ್ಮಕ ಮೈಲಿಗಲ್ಲು’ ಎಂದು ಬಣ್ಣಿಸಿರುವ ಈ ಕ್ಷಣವನ್ನು ಗುರುತಿಸಲು, ಪ್ರಧಾನಿಯವರು 100 ರೂ.ಗಳ ಸ್ಮರಣಾರ್ಥ ನಾಣ್ಯವನ್ನು ಸಹ ಬಿಡುಗಡೆ ಮಾಡಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ರೈತರು, ಮಹಿಳೆಯರು, ಯುವಕರು ಮತ್ತು ದುರ್ಬಲ ನಾಗರಿಕರಿಗೆ ಪ್ರಯೋಜನಕಾರಿಯಾದ ಪ್ರಮುಖ ಉಪಕ್ರಮಗಳನ್ನು ಅನುಮೋದಿಸಿದರು.
ಪ್ರಧಾನ ಮಂತ್ರಿ ಮೋದಿ ಪಿಎಂ ರಾಹತ್ ಯೋಜನೆಯನ್ನು ಪ್ರಾರಂಭಿಸಲು ಅನುಮೋದನೆ ನೀಡಿದರು. ಈ ಉಪಕ್ರಮದ ಅಡಿಯಲ್ಲಿ ಅಪಘಾತ ಸಂತ್ರಸ್ತರಿಗೆ 1.5 ಲಕ್ಷ ರೂ.ಗಳವರೆಗೆ ನಗದು ರಹಿತ ಚಿಕಿತ್ಸೆಯನ್ನು ಒದಗಿಸುತ್ತದೆ.
ಲಖ್ ಪತಿ ದೀದಿ ಗುರಿ ದ್ವಿಗುಣ: ನಿಗದಿತ ಸಮಯಕ್ಕಿಂತ ಮುಂಚಿತವಾಗಿ 3 ಕೋಟಿ ದಾಟಿದ ನಂತರ ಲಖ್ ಪತಿ ದೀದಿಯರ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಮಾರ್ಚ್ 2029 ರ ವೇಳೆಗೆ ಗುರಿಯನ್ನು 6 ಕೋಟಿಗೆ ಹೆಚ್ಚಿಸಲಾಗಿದೆ.
ಕೇಂದ್ರ ಸರ್ಕಾರ ಕೃಷಿ ಮೂಲಸೌಕರ್ಯ ನಿಧಿಯನ್ನು 2 ಲಕ್ಷ ಕೋಟಿಗೆ ದ್ವಿಗುಣಗೊಳಿಸಿದೆ. ಭಾರತದ ಸಂಪೂರ್ಣ ಕೃಷಿ ಮೌಲ್ಯ ಸರಪಳಿಯನ್ನು ಬಲಪಡಿಸುವ ಗುರಿಯೊಂದಿಗೆ ಪ್ರಧಾನಿ ಮೋದಿ ಕೃಷಿ ಮೂಲಸೌಕರ್ಯ ನಿಧಿಯ ವೆಚ್ಚವನ್ನು ₹1 ಲಕ್ಷ ಕೋಟಿ ರೂ.ನಿಂದ 2 ಲಕ್ಷ ಕೋಟಿಗೆ ದ್ವಿಗುಣಗೊಳಿಸಲು ಅನುಮೋದಿಸಿದ್ದಾರೆ.
ಯುವಕರು ಉದ್ಯಮವನ್ನು ಆರಂಭಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಟಾರ್ಟ್ಅಪ್ ಇಂಡಿಯಾ ಯೋಜನೆ ಆರಂಭಿಸಲಾಗಿದೆ.ಪ್ರಧಾನ ಮಂತ್ರಿಗಳು 10,000 ಕೋಟಿ ರೂ.ಗಳ ನಿಧಿಯೊಂದಿಗೆ ಸ್ಟಾರ್ಟ್ಅಪ್ ಇಂಡಿಯಾ ನಿಧಿ 2.0 ಅನ್ನು ಅನುಮೋದಿಸಿದ್ದಾರೆ.



