Saturday, August 30, 2025

VIRAL | ಇದೇನಿದು ವಿಚಿತ್ರ? ನೀಲಿ ಮೊಟ್ಟೆ ಇಟ್ಟ ಕೋಳಿ! ಆಶ್ಚರ್ಯಪಟ್ಟ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿತ್ಯ ಬಿಳಿ ಬಣ್ಣದ ಮೊಟ್ಟೆ ಇಡುತ್ತಿದ್ದ ಕೋಳಿ, ಇದ್ದಕ್ಕಿದ್ದಂತೆ ನೀಲಿ ಬಣ್ಣದ ಮೊಟ್ಟೆ ಇಟ್ಟು ಅಚ್ಚರಿ ಮೂಡಿಸಿದ ಘಟನೆ ಚನ್ನಗಿರಿಯ ನಲ್ಲೂರ ಗ್ರಾಮದಲ್ಲಿ ನಡೆದಿದೆ.

ಸೈಯದ್ ನೂರ್ ಎಂಬವರಿಗೆ ಸೇರಿದ ನಾಟಿ ಕೋಳಿ ನೀಲಿ ಬಣ್ಣದ ಮೊಟ್ಟೆ ಇಟ್ಟಿದೆ. ಸೈಯದ್ ಮನೆಯಲ್ಲಿ ಹತ್ತು ಕೋಳಿಗಳಿವೆ. ಇದರಲ್ಲಿ ಒಂದು ಕೋಳಿ ಇದ್ದಕ್ಕಿದ್ದಂತೆ ನೀಲಿ ಬಣ್ಣದ ಮೊಟ್ಟೆ ಇಟ್ಟಿದೆ. ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಮೊಟ್ಟೆಯನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಜನರು ನೀಲಿ ಮೊಟ್ಟೆಯನ್ನು ನೋಡಿ ಫೋಟೊ ತೆಗೆದುಕೊಳ್ಳುತ್ತಿದ್ದಾರೆ. ಬಿಳಿ, ಬ್ರೌನ್‌ ಬಣ್ಣದ ಬಟ್ಟೆ ನೋಡಿದ್ದೇವೆ ಇದ್ಯಾವ ನೀಲಿ ಮೊಟ್ಟೆ ಎಂದು ಕಣ್ಣು ಬಿಟ್ಟಿದ್ದಾರೆ.

ಇದನ್ನೂ ಓದಿ