ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರಿಗೆ ವೈದ್ಯಕೀಯ ನೆರವು ಒದಗಿಸುವಂತೆ ಬೆಂಗಳೂರು ನ್ಯಾಯಾಲಯವು ಅಪರಾಧ ತನಿಖಾ ದಳಕ್ಕೆ ಸೂಚನೆ ನೀಡಿದೆ. ಬಂಧನದ ಬಳಿಕ ಹೃದಯ ಸಂಬಂಧಿ ಅಸ್ವಸ್ಥತೆ ಇದೆ ಎಂದು ತಿಳಿದ ಹಿನ್ನೆಲೆಯಲ್ಲಿ ಈ ಆದೇಶ ಹೊರಬಿದ್ದಿದೆ.
ಮೊದಲು ಅವರನ್ನು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಹೆಚ್ಚಿನ ಹೃದಯ ಪರೀಕ್ಷೆ ಅಗತ್ಯವೆಂದು ವೈದ್ಯರು ಅಭಿಪ್ರಾಯಪತ್ತಿದ್ದಾರೆ. ಅದರ ಆಧಾರದ ಮೇಲೆ ಶ್ರೀ ಜಯದೇವ ಹೃದಯ ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸಮಗ್ರ ಪರೀಕ್ಷೆ ನಡೆಸಲು ನ್ಯಾಯಾಲಯ ಅನುಮತಿ ನೀಡಿದೆ.
ಇದನ್ನೂ ಓದಿ:
ಸಿಐಡಿ ವಶದಲ್ಲೇ ಇರುವ ಬಸವರಾಜ್ ಅವರ ಪರೀಕ್ಷೆಗಳು ಅಧಿಕೃತ ಮೇಲ್ವಿಚಾರಣೆಯಲ್ಲಿ ನಡೆಯಲಿವೆ. ವೈದ್ಯಕೀಯ ವರದಿಯೊಂದಿಗೆ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಆದೇಶಿಸಲಾಗಿದೆ. ವರದಿ ಆಧರಿಸಿ ನ್ಯಾಯಾಂಗ ಬಂಧನ ಅಥವಾ ಮುಂದಿನ ವಿಚಾರಣೆ ಕುರಿತು ತೀರ್ಮಾನ ಕೈಗೊಳ್ಳಲಾಗುವುದು.



