Monday, January 12, 2026

ತೋಟದಲ್ಲಿ ಫೋಟೊ ತೆಗೆಸಿಕೊಳ್ಳೋದಕ್ಕೆ 20 ರೂಪಾಯಿ ಫೀಸ್‌, ರೈತನ ಸೂಪರ್‌ ಬ್ಯುಸಿನೆಸ್‌ ಐಡಿಯಾ ಇದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಇತ್ತೀಚೆಗೆ ಜನಕ್ಕೆ ಫೋಟೊ ಕ್ರೇಝ್‌ ಹೆಚ್ಚಾಗಿದೆ. ಯಾರಾದರೂ ಸೋಶಿಯಲ್‌ ಮೀಡಿಯಾದಲ್ಲಿ ಫೋಟೊ ಹಾಕಿ ಫೇಮಸ್‌ ಮಾಡಿಬಿಟ್ರೆ ಮರುದಿನ ಆ ಜಾಗದಲ್ಲಿ ಜನಜಂಗುಳಿ ಇರುತ್ತದೆ. ಇದೇ ರೀತಿ ಸೂರ್ಯಕಾಂತಿ ತೋಟ ಕೂಡ ಫೇಮಸ್‌ ಆಗಿದೆ. 

ಇಲ್ಲಿ ಫೋಟೊ ತೆಗೆಸಿಕೊಂಡು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡೋಕೆ ಜನ ಮುಗಿಬಿದ್ದಿದ್ದಾರೆ. ಇದನ್ನೇ ಬ್ಯುಸಿನೆಸ್‌ ಐಡಿಯಾ ಮಾಡಿಕೊಂಡ ರೈತ ಎಂಟ್ರಿಗೆ ಇಪ್ಪತ್ತು ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ. 

ಚಾಮರಾಚನಗರದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ  ಏರೋರ ಸಂಖ್ಯೆ ಹೆಚ್ಚು. ಅದು ಪ್ರಸಿದ್ಧ ಪ್ರವಾಸಿ ತಾಣ ಮೈಸೂರಿನಿಂದ ಕೇವಲ 80 ಕಿಲೋಮೀಟರ್ ದೂರದಲ್ಲಿರುವ ಈ ಬೆಟ್ಟ ಊಟಿ ರಸ್ತೆಯಲ್ಲಿದೆ. ವೀಕೆಂಡ್ ಬಂದ್ರೆ ಸಾಲು ಸಾಲು ವಾಹನ ಈ ರಸ್ತೆಯಲ್ಲಿ ಓಡಾಡುತ್ತೆ. ಗುಂಡ್ಲಪೇಟೆ ಬಳಿ ಇರುವ ಈ ಪ್ರವಾಸಿ ತಾಣಕ್ಕೆ ಬರುವವರ ಕಣ್ಣು, ಗುಂಡ್ಲಪೇಟೆ ರೈತರು ಬೆಳೆದ ಸುಂದರ ಹೂಗಳ ಮೇಲಿರುತ್ತೆ. ತರಕಾರಿ, ಹೂ ನೋಡ್ತಿದ್ದಂತೆ ವಾಹನ ನಿಲ್ಲಿಸಿ, ಫೋಟೋ ಕ್ಲಿಕ್ಕಿಸಿಕೊಳ್ಳೋಕೆ ತೋಟಕ್ಕೆ ನುಗ್ತಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಲಾಗಿದೆ. ಅದ್ರ ಪ್ರಕಾರ, ಗುಂಡ್ಲಪೇಟೆ ಸೂರ್ಯಕಾಂತಿ ತೋಟಕ್ಕೆ ಬರುವ ಪ್ರವಾಸಿಗರಿಗೆ ತೋಟದ ಮಾಲೀಕ ಚಾರ್ಜ್ ಮಾಡ್ತಿದ್ದಾರೆ. ಒಬ್ಬರು 20 ರೂಪಾಯಿ ನೀಡಿ ತೋಟಕ್ಕೆ ಹೋಗ್ಬಹುದು. ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ವೈರಲ್ ಆಗ್ತಿದ್ದಂತೆ ನೆಟ್ಟಿಗರು ಕಮೆಂಟ್ ಮೇಲೆ ಕಮೆಂಟ್ ಮಾಡಿದ್ದಾರೆ.

ಇದು ಒಳ್ಳೆಯ ಐಡಿಯಾ, ಪ್ರವಾಸಿಗರಿಂದ ಬೆಳೆ ಹಾಳಾಗುತ್ತದೆ. ಅದನ್ನು ಕೇಳೋರಿಲ್ಲ. ರೈತ ತನ್ನ ಬೆಳೆ ರಕ್ಷಣೆಗೆ ಹಣ ಪಡೆದ್ರೆ ಬೇಸರವಿಲ್ಲ ಎನ್ನುವ ಕಮೆಂಟ್ ಬಂದಿದೆ. ಬಹುತೇಕರು 20 ರೂಪಾಯಿ ಬಹಳ ಕಡಿಮೆ, 50 -100 ರೂಪಾಯಿ ಚಾರ್ಜ್ ಮಾಡಿ ಅಂತ ಸಲಹೆ ಕೂಡ ನೀಡಿದ್ದಾರೆ. ತಲೆ ಅಂದ್ರ ಇದು, ಈಗಿನ ಜನರೇಷನ್ ದೂರುವ ಬದಲು ಅದನ್ನೇ ಬ್ಯುಸಿನೆಸ್ ಮಾಡ್ಕೊಂಡಿದ್ದಾರೆ ಅಂತ ಬಳಕೆದಾರರು ರೈತನ ಬೆನ್ನುತಟ್ಟಿದ್ದಾರೆ.

Related articles

Comments

LEAVE A REPLY

Please enter your comment!
Please enter your name here

ಇತರರಿಗೂ ಹಂಚಿ

Latest articles

Newsletter

error: Content is protected !!