February 15, 2026
Sunday, February 15, 2026
spot_img

CINE | ಫ್ಯಾನ್ಸ್ ಗೆ ಕಾದು ಕಾದು ಸಾಕಾಯ್ತು..! ‘ಜನ ನಾಯಗನ್’ ಬಿಡುಗಡೆಗೆ ಲಕ್ಷಣ ಕಾಣ್ತಿಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರ ಎನ್ನುವ ಕಾರಣಕ್ಕೆ ಜನ ನಾಯಗನ್ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿತ್ತು. ಆರಂಭದಲ್ಲೇ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಹಲವು ಅಡಚಣೆಗಳಿಂದ ಮುಂದೂಡಿಕೆಯಾಗುತ್ತಲೇ ಬಂದಿದೆ. ಸೆನ್ಸಾರ್ ಸಂಬಂಧಿತ ತೊಂದರೆಗಳು ಮತ್ತು ಕಾನೂನು ವಿಚಾರಗಳಿಂದಾಗಿ ಚಿತ್ರ ಬಿಡುಗಡೆ ದಿನಾಂಕ ಸ್ಪಷ್ಟವಾಗದೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ನಡುವೆ ಅಮೆರಿಕದಲ್ಲಿ ಚಿತ್ರ ವಿತರಣೆ ಮಾಡುತ್ತಿರುವ ಯಾರ್ಕ್ ಸಿನಿಮಾಸ್ ಸಂಸ್ಥೆ ಮಹತ್ವದ ಮಾಹಿತಿ ನೀಡಿದೆ. 30ರವರೆಗೆ ಸಿನಿಮಾ ಬಿಡುಗಡೆಯಾಗುವುದಿಲ್ಲ ಎಂದು ತಿಳಿಸಲಾಗಿದ್ದು, ಈಗಾಗಲೇ ಟಿಕೆಟ್ ಪಡೆದವರು ಹಣ ಮರುಪಾವತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ಹೊರಡಿಸಲಾಗಿದೆ. ಈ ಸುದ್ದಿ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ.

ಇದನ್ನೂ ಓದಿ:

ಇನ್ನೊಂದೆಡೆ ತಮಿಳುನಾಡುದಲ್ಲಿ ನಡೆಯಲಿರುವ ಚುನಾವಣೆಯೂ ಬಿಡುಗಡೆ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ. ರಾಜಕೀಯ ಹಿನ್ನೆಲೆಯ ಕಥೆ ಹೊಂದಿರುವುದರಿಂದ ಸಿನಿಮಾ ಬಿಡುಗಡೆ ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ. ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ದು, ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಅಧಿಕೃತ ಬಿಡುಗಡೆ ದಿನಾಂಕಕ್ಕಾಗಿ ಅಭಿಮಾನಿಗಳು ಕಾದು ನೋಡುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !