February 15, 2026
Sunday, February 15, 2026
spot_img

ಮೈದಾನದಲ್ಲಿ ಸೆಣಸಾಟ, ಮನಸ್ಸಿನಲ್ಲಿ ಕಹಿ? ಹ್ಯಾಂಡ್‌ಶೇಕ್ ಸಂಪ್ರದಾಯಕ್ಕೆ ‘SKY’ ಎಳ್ಳುನೀರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ 2026ರ ಟಿ20 ವಿಶ್ವಕಪ್‌ನ ಈ ಮಹಾಸಮರ ಕೇವಲ ಬ್ಯಾಟ್-ಬಾಲ್ ಕಾಳಗವಾಗಿ ಉಳಿದಿಲ್ಲ; ಇದು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಗೆದ್ದರೆ ‘ಸೂಪರ್ 8’ ಹಂತಕ್ಕೆ ಎಂಟ್ರಿ, ಸೋತರೆ ಸಂಕಷ್ಟ ಎಂಬ ಪರಿಸ್ಥಿತಿಯಲ್ಲಿ ಉಭಯ ತಂಡಗಳು ಅಖಾಡಕ್ಕಿಳಿದಿವೆ.

ಪಂದ್ಯದ ಆರಂಭದಲ್ಲೇ ಹೈ-ಡ್ರಾಮಾ ನಡೆದಿದೆ. ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಆಘಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಟಾಸ್ ಪ್ರಕ್ರಿಯೆ ಮುಗಿದ ಬಳಿಕ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಆ ಒಂದು ಕ್ಷಣ ಬರಲೇ ಇಲ್ಲ. ಸಲ್ಮಾನ್ ಆಘಾ ತಮ್ಮ ನಿರ್ಧಾರ ಪ್ರಕಟಿಸಿ ಪಕ್ಕಕ್ಕೆ ಸರಿದರೆ, ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಎದುರಾಳಿ ನಾಯಕನತ್ತ ಕಣ್ಣೆತ್ತಿಯೂ ನೋಡದೆ ಮೈದಾನದಿಂದ ಹೊರನಡೆದರು.

ವಾಸ್ತವವಾಗಿ, ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಮೈದಾನದಲ್ಲಿ ಹ್ಯಾಂಡ್‌ಶೇಕ್ ಮಾಡದಿರುವ ಈ ಪದ್ಧತಿ ಕಳೆದ ಏಷ್ಯಾಕಪ್‌ನಿಂದಲೇ ಚರ್ಚೆಯಲ್ಲಿದೆ. ಸತತ ನಾಲ್ಕನೇ ಪಂದ್ಯದಲ್ಲೂ (ಏಷ್ಯಾಕಪ್‌ನ 3 ಪಂದ್ಯ ಸೇರಿದಂತೆ) ಸೂರ್ಯಕುಮಾರ್ ಯಾದವ್ ಅವರು ಪಾಕ್ ನಾಯಕನೊಂದಿಗೆ ಕೈಕುಲುಕದೆ ಶಿಸ್ತಿನ ನಡೆಯೋ ಅಥವಾ ಪ್ರತಿಭಟನೆಯೋ ಎಂಬ ಗೊಂದಲಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಈ ಹಿಂದೆ ಇದು ಸಾಕಷ್ಟು ವಿವಾದ ಸೃಷ್ಟಿಸಿದ್ದರೂ, ಸೂರ್ಯ ಮಾತ್ರ ತಮ್ಮ ನಿಲುವನ್ನು ಬದಲಿಸಿದಂತೆ ಕಾಣುತ್ತಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !