ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಲಂಬೊದಲ್ಲಿ ನಡೆದ T20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 61 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಪ್ರತಿಸ್ಪರ್ಧಿಗಳ ನಡುವಿನ ಪೈಪೋಟಿ ಎಂದೇ ಗುರುತಿಸಲ್ಪಡುವ ಈ ಪಂದ್ಯದಲ್ಲಿ ಪಾಕ್ ತಂಡ ಯಾವುದೇ ಹಂತದಲ್ಲೂ ಸವಾಲು ಒಡ್ಡಲು ಸಾಧ್ಯವಾಗಲಿಲ್ಲ. 176 ರನ್ ಗುರಿ ಬೆನ್ನಟ್ಟಿದ ಪಾಕಿಸ್ತಾನ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿತು.
ಭಾರತದ ಬೌಲರ್‌ಗಳು ಕಟ್ಟುನಿಟ್ಟಿನ ದಾಳಿಯಿಂದ ಪಾಕ್ ಬ್ಯಾಟಿಂಗ್ ಕ್ರಮವನ್ನು ಕುಸಿತಕ್ಕೊಳಪಡಿಸಿದರು. 18 ಓವರ್‌ಗಳಲ್ಲಿ 114 ರನ್‌ಗಳಿಗೆ ಪಾಕಿಸ್ತಾನ ಆಲೌಟ್ ಆಯಿತು. 12ನೇ ಓವರ್‌ನಲ್ಲಿ ಮೊಹಮ್ಮದ್ ನವಾಜ್ ಔಟಾದ ಕ್ಷಣದಿಂದಲೇ ಪಂದ್ಯ ಭಾರತ ಕಡೆ ತಿರುಗಿತು. ಆ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಮೈದಾನ ತೊರೆದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:
ಈ ಸೋಲಿನ ಬಳಿಕ ಪಾಕ್ ತಂಡವನ್ನು ಅಭಿಮಾನಿಗಳು ತೀವ್ರವಾಗಿ ಟೀಕಿಸಿದ್ದಾರೆ. ಇನ್ನೊಂದೆಡೆ ಅಫ್ಘಾನಿಸ್ತಾನದಲ್ಲೂ ಭಾರತೀಯ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ ವಿಡಿಯೋಗಳು ಹರಿದಾಡುತ್ತಿವೆ. ಭಾರತ ತಂಡದ ಸಮಗ್ರ ಪ್ರದರ್ಶನ ಮತ್ತೆ ಪ್ರಾಬಲ್ಯವನ್ನು ಸಾಬೀತುಪಡಿಸಿದೆ.



