April 10, 2026
Friday, April 10, 2026
spot_img

ರೈಲು ಪ್ರಯಾಣಿಕರೇ ಗಮನಿಸಿ, ಇನ್ಮುಂದೆ ಈ ತಪ್ಪು ಮಾಡಿದ್ರೆ ನಿಮ್ಮ ಟಿಕೆಟ್ ಆಗುತ್ತೆ ಕ್ಯಾನ್ಸಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ನು ಮುಂದೆ ರೈಲು ಗಳಲ್ಲಿ ಕಾಯ್ದಿರಿಸಿದ ಟಿಕೆಟ್ ಹೊಂದಿರುವ ಪ್ರಯಾಣಿಕರು ತಮ್ಮ ಟಿಕೆಟ್‌ನಲ್ಲಿ ಉಲ್ಲೇಖಿಸಿರುವ ನಿಗದಿತ ನಿಲ್ದಾಣದಲ್ಲಿ ರೈಲು ಏರದಿದ್ದಲ್ಲಿ, ಅವರ ಕಾಯ್ದಿರಿಸಿದ ಸೀಟ್ ಸ್ವಯಂಚಾಲಿತವಾಗಿ ರದ್ದುಗೊಳ್ಳಲಿದೆ. ಹೌದು ಭಾರತೀಯ ರೈಲ್ವೆಯು ಇದೀಗ ಕಾಯ್ದಿರಿಸುವ ಟಿಕೆಟ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ.

ಇದಕ್ಕಾಗಿ ರೈಲ್ವೆ ಇಲಾಖೆ ಟಿಕೆಟ್ ಪರಿಶೀಲಕರಿಗೆ (ಟಿಟಿಇ) ಹೊಸ ಹ್ಯಾಂಡ್ ಹೆಲ್ಡ್ ಟರ್ಮಿನಲ್ (HHT) ಟ್ಯಾಬ್ಲೆಟ್‌ಗಳು ಒದಗಿಸಿದೆ. ಕಾಯ್ದಿರಿಸಿದ ಪ್ರಯಾಣಿಕರು ನಿಗದಿತ ನಿಲ್ದಾಣದಲ್ಲಿ ರೈಲು ಏರದಿದ್ದರೆ, ಟಿಟಿಇ ತಕ್ಷಣವೇ ಆ ಮಾಹಿತಿಯನ್ನು ಈ ಸಾಧನದಲ್ಲಿ ದಾಖಲಿಸುತ್ತಾರೆ. ಈ ದಾಖಲೆಯ ಆಧಾರದ ಮೇಲೆ, ಆ ಸೀಟ್ ಅನ್ನು ತಕ್ಷಣವೇ ಕಾಯುವಿಕೆ ಪಟ್ಟಿಯಲ್ಲಿರುವ ಪ್ರಯಾಣಿಕರಿಗೆ ಹಂಚಲಾಗುತ್ತದೆ. ಜೊತೆಗೆ ಈ ಮಾಹಿತಿಯನ್ನು ಮೂಲ ಪ್ರಯಾಣಿಕರಿಗೆ ಎಸ್‌ಎಂಎಸ್ ಮೂಲಕ ತಿಳಿಸಲಾಗುತ್ತದೆ.

ಈ ಹಿಂದೆ, ಕಾಯ್ದಿರಿಸಿದ ಪ್ರಯಾಣಿಕರು ಏರದಿದ್ದರೂ ಆ ಸೀಟ್ ಅನ್ನು ಮುಂದಿನ ಎರಡು ನಿಲ್ದಾಣಗಳವರೆಗೆ ಖಾಲಿ ಬಿಡಲಾಗುತ್ತಿತ್ತು. ಆದ್ರೆ ಇದೀಗ ಹೊಸ ನಿಯಮದಿಂದಾಗಿ ಸೀಟ್ ವ್ಯರ್ಥವಾಗುವುದನ್ನು ತಡೆಯುವ ಜೊತೆಗೆ ಕಾಯುವಿಕೆ ಪಟ್ಟಿಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !