September 28, 2026
Monday, September 28, 2026
spot_img

ಬಂಡೀಪುರ ಸಫಾರಿ ಮತ್ತೆ ಆರಂಭಿಸಿದ್ದಕ್ಕೆ ರೈತರ ಆಕ್ರೋಶ, ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಂದ್‌ ಆಗಿದ್ದ ಸಫಾರಿ ಮತ್ತೆ ಈಗ ಆರಂಭವಾಗಿದೆ.

ಸಫಾರಿ ಸಮಯದಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾತ್ರ ಮಾಡಿ ಸಫಾರಿಗೆ ಅನುವು ಮಾಡಿಕೊಡಲಾಗಿದೆ. ಆದರೆ ಸಫಾರಿ ಆರಂಭಿಸುವುದು ಬೇಡ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಫಾರಿ ಆರಂಭವಾದರೆ ವನ್ಯಜೀವಿಗಳು ಅರಣ್ಯ ಗಡಿ ಗ್ರಾಮಗಳ ಹತ್ತಿರು ಬರುತ್ತದೆ. ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತದೆ. ಈಗಾಗಲೇ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ. ಸಫಾರಿ ಈಕೂಡಲೇ ಸ್ಥಗಿತಗೊಳಿಸಿ ಎಂದು ರೈತರು ಪ್ರತಿಭಟನೆ ನಡೆಸಿದ್ದಾರೆ.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಅರಣ್ಯ ಗಡಿ ಗ್ರಾಮಗಳಲ್ಲಿ ರೈತರು ಮತ್ತು ಗ್ರಾಮಸ್ಥರು ಈಗಲೂ ಆನೆ, ಚಿರತೆ ಹಾಗೂ ಇತರೆ ವನ್ಯಜೀವಿಗಳಿಂದ ಬೆಳೆ ನಾಶ ಮತ್ತು ಜೀವಭಯವನ್ನು ಎದುರಿಸುತ್ತಿದ್ದಾರೆ.

Must Read