February 20, 2026
Friday, February 20, 2026
spot_img

ಕೊಡಗು ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಐವರ ಬಂಧನ

ಹೊಸ ದಿಗಂತ ವರದಿ, ಮಡಿಕೇರಿ:

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳ ಮಾರಾಟ ಮತ್ತು ಸರಬರಾಜು ಮಾಡುತ್ತಿದ್ದ ಐವರನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.

ಮಡಿಕೇರಿ ತಾಲೂಕಿನ ಕಿಗ್ಗಾಲು ಗ್ರಾಮದ ಕಾರ್ತಿಕ್ (27) ಬಲಮುರಿಯ ಹರ್ಷವರ್ಧನ್‌.ಹೆಚ್.ಜಿ (26), ನೀರುಕೊಲ್ಲಿಯ

ಸಾಜೀರ್ (39) ಶಾರೂಖ್ (28) ಇಬ್ನಿವಳವಾಡಿಯ ನಿಯಾಸ್ (39 ) ಬಂಧಿತ ಆರೋಪಿಗಳಾಗಿದ್ದು, ಅವರಿಂದ 245 ಗ್ರಾಂ ಗಾಂಜಾ, 28.50 ಗ್ರಾಂ ಎಂಡಿಎಂಎ, ಕೃತ್ಯಕ್ಕೆ ಬಳಸಿದ ಒಂದು ಆಟೋ ಮತ್ತು ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಿಗ್ಗಾಲು ಗ್ರಾಮದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ/ಸೇವನೆ ಕುರಿತು ದೊರೆತ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಫೆ.18ರಂದು ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಹಾಗೂ ಫೆ.19ರಂದು ಕಡಗದಾಳು ಗ್ರಾಮದಲ್ಲಿ ಮೂವರನ್ನು ನಿಷೇಧಿತ ಮಾದಕ ವಸ್ತುವಿನೊಂದಿಗೆ ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಸೂರಜ್.ಪಿ.ಎ, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಚಂದ್ರಶೇಖರ್.ಹೆಚ್.ವಿ, ಗ್ರಾಮಾಂತರ ಠಾಣೆಯ ಪ್ರೊಬೆಷನರಿ ಪಿಎಎಸ್ಐ ಸುಬ್ರಮಣ್ಯ, ಎಎಸ್ಐಗಳಾದ ವಸಂತ, ಚರ್ಮಣ, ಸಿಬ್ಬಂದಿಗಳಾದ ಪ್ರೇಮ್ ಕುಮಾರ್, ಲೋಕೇಶ್, ಹೆಚ್‌, ಮಹೇಶ್.ಎಂ.ಕೆ, ಮಧುಸೂದನ್, ಹೆಚ್‌, ಪ್ರಸನ್ನ ಕುಮಾರ್, ಉದಯ ಕುಮಾರ್.ಜಿ.ಆರ್, ಹರೀಶ್.ಎಲ್, ಮಂಜುನಾಥ.ಸಿ, ರಾಜೇಂದ್ರ.ಕೆ.ಸಿ, ಸಂತೋಷ್, ಈರಪ್ಪ ವಠಾರ, ಮಂಜುನಾಥ.ಬಿ.ಡಿ ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ.ಆರ್.ಎನ್ ಅವರು ಶ್ಲಾಘಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !