ಮಾರುಕಟ್ಟೆಯಿಂದ ಮನೆಗೆ ತರೋ ಹಣ್ಣು–ತರಕಾರಿಗಳು ತಾಜಾ ಕಾಣಿಸಬಹುದು. ಆದರೆ ಅವುಗಳ ಮೇಲೆ ಕೀಟನಾಶಕ ಹಾಕಿರೋ ಸಾಧ್ಯತೆ ಇದೆ. ಸರಿಯಾಗಿ ತೊಳೆಯದೇ ಬಳಿಸಿದರೆ ಆರೋಗ್ಯಕ್ಕೆ ಹಾನಿಯಾಗಬಹುದು. ಆದ್ದರಿಂದ ಕೆಲ ಸರಳ ವಿಧಾನಗಳನ್ನು ಅನುಸರಿಸಿದರೆ ಬಹುತೇಕ ರಾಸಾಯನಿಕಗಳನ್ನು ಕಡಿಮೆ ಮಾಡಬಹುದು.
ಉಪ್ಪು ನೀರಿನಲ್ಲಿ ನೆನೆಸುವುದು
ಒಂದು ದೊಡ್ಡ ಪಾತ್ರೆಯಲ್ಲಿ ನೀರು ತೆಗೆದು ಅದಕ್ಕೆ 1–2 ಟೇಬಲ್ ಸ್ಪೂನ್ ಉಪ್ಪು ಹಾಕಿ. ಹಣ್ಣು–ತರಕಾರಿಗಳನ್ನು 15–20 ನಿಮಿಷ ಈ ನೀರಿನಲ್ಲಿ ನೆನೆಸಿಡಿ. ಬಳಿಕ ಶುದ್ಧ ನೀರಿನಲ್ಲಿ ಮತ್ತೊಮ್ಮೆ ಚೆನ್ನಾಗಿ ತೊಳೆಯಿರಿ. ಇದರಿಂದ ಮೇಲ್ಮೈಯಲ್ಲಿರುವ ಧೂಳು ಹಾಗೂ ಕೀಟನಾಶಕ ಕಡಿಮೆಯಾಗುತ್ತದೆ.
ಬೇಕಿಂಗ್ ಸೋಡಾ ಉಪಯೋಗ
ಒಂದು ಲೀಟರ್ ನೀರಿಗೆ ಅರ್ಧ ಟೀ ಸ್ಪೂನ್ ಬೇಕಿಂಗ್ ಸೋಡಾ ಸೇರಿಸಿ. ಆ ದ್ರಾವಣದಲ್ಲಿ ತರಕಾರಿಗಳನ್ನು 10–15 ನಿಮಿಷ ಇಟ್ಟು ನಂತರ ತೊಳೆಯಿರಿ. ವಿಶೇಷವಾಗಿ ಸೇಬು, ದ್ರಾಕ್ಷಿ ಮುಂತಾದ ಹಣ್ಣುಗಳಿಗೆ ಇದು ಪರಿಣಾಮಕಾರಿ.
ಇದನ್ನೂ ಓದಿ:
ಹರಿಯುವ ನೀರಿನಲ್ಲಿ ತೊಳೆಯಿರಿ
ಎಲೆ ತರಕಾರಿಗಳು ಮತ್ತು ಬೇರು ತರಕಾರಿಗಳನ್ನು ಹರಿಯುವ ನೀರಿನಲ್ಲಿ ಚೆನ್ನಾಗಿ ಒರೆಸಿ ತೊಳೆಯಬೇಕು. ಹೊರ ಪದರ ತೆಗೆದು ಬಳಿಸಿದರೆ ಇನ್ನೂ ಸುರಕ್ಷಿತ.
ಸಣ್ಣ ಎಚ್ಚರಿಕೆ
ಸಾಬೂನು ಅಥವಾ ಡಿಟರ್ಜೆಂಟ್ ಬಳಸದಿರಿ. ಅವುಗಳ ಅವಶೇಷವೂ ಹಾನಿಕಾರಕವಾಗಬಹುದು. ತೊಳೆದ ಬಳಿಕ ಒಣಗಿಸಿ ಸಂಗ್ರಹಿಸಿ.



