April 10, 2026
Friday, April 10, 2026
spot_img

FOOD | ಸಂಜೆಯ ಸಣ್ಣ ಹಸಿವಿಗೆ ಈ ಬ್ರೆಡ್ ಆಮ್ಲೆಟ್ ಬೆಸ್ಟ್! ಟ್ರೈ ಮಾಡಿ

ಸಂಜೆ ವೇಳೆಗೆ ಸಣ್ಣ ಹಸಿವು ಕಾಡಿದಾಗ ತಕ್ಷಣ ಏನಾದರೂ ರುಚಿಕರವಾದದ್ದು ಬೇಕೆನಿಸುತ್ತದೆ. ಅಂಥ ಸಮಯದಲ್ಲಿ ಬೇಗನೆ ತಯಾರಾಗೋದು ಅಂದ್ರೆ ಅದು ಬ್ರೆಡ್ ಆಮ್ಲೆಟ್.

ಬೇಕಾಗುವ ಸಾಮಗ್ರಿಗಳು:

ಮೊಟ್ಟೆ – 2
ಬ್ರೆಡ್ ತುಂಡುಗಳು – 4
ಈರುಳ್ಳಿ – 2 ಟೇಬಲ್ ಸ್ಪೂನ್
ಹಸಿರು ಮೆಣಸಿನಕಾಯಿ – 1
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಮೆಣಸಿನಪುಡಿ – ½ ಟೀ ಸ್ಪೂನ್
ಎಣ್ಣೆ ಅಥವಾ ಬೆಣ್ಣೆ – 2 ಟೀ ಸ್ಪೂನ್

ತಯಾರಿಸುವ ವಿಧಾನ:

ಒಂದು ಬಟ್ಟಲಿನಲ್ಲಿ ಮೊಟ್ಟೆಗಳನ್ನು ಒಡೆದು ಚೆನ್ನಾಗಿ ಕಲಕಿ. ಅದಕ್ಕೆ ಈರುಳ್ಳಿ, ಹಸಿರು ಮೆಣಸು, ಕೊತ್ತಂಬರಿ, ಉಪ್ಪು ಮತ್ತು ಮೆಣಸಿನಪುಡಿ ಸೇರಿಸಿ ಮಿಶ್ರಣ ಮಾಡಿ.

ಪ್ಯಾನ್‌ನ್ನು ಬಿಸಿ ಮಾಡಿ ಸ್ವಲ್ಪ ಎಣ್ಣೆ ಹಾಕಿ. ಮೊಟ್ಟೆ ಮಿಶ್ರಣವನ್ನು ಪ್ಯಾನ್ ಮೇಲೆ ಹರಡಿ. ಮೇಲ್ಭಾಗಕ್ಕೆ ಬ್ರೆಡ್ ತುಂಡುಗಳನ್ನು ಇಟ್ಟು ಮತ್ತು ಮೃದುವಾಗಿ ಒತ್ತಿ. ಒಂದು ಬದಿ ಬೆಂದ ನಂತರ ತಿರುಗಿಸಿ ಎರಡೂ ಬದಿಯೂ ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ.

ಬಿಸಿ ಬಿಸಿ ಬ್ರೆಡ್ ಆಮ್ಲೆಟ್ ಅನ್ನು ಟೊಮೇಟೊ ಸಾಸ್ ಜೊತೆ ಸವಿಯಿರಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !