April 10, 2026
Friday, April 10, 2026
spot_img

ಪಾಕ್​ ಉಗ್ರ ಸಂಘಟನೆಗಳ ಜೊತೆ ನಂಟು: ತಮಿಳುನಾಡಿನಲ್ಲಿ 6 ಬಾಂಗ್ಲಾ ಪ್ರಜೆಗಳ ಬಂಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನಲ್ಲಿ ಇಂದು ದೆಹಲಿ ಪೊಲೀಸರು ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುತ್ತಿದ್ದ 6 ಜನ ಬಾಂಗ್ಲಾ ಪ್ರಜೆಗಳನ್ನು ಬಂಧಿಸಿದ್ದಾರೆ.

2025ರ ದೆಹಲಿಯ ಕೆಂಪು ಕೋಟೆ ಸ್ಫೋಟದ ನಂತರ, ದೇವಾಲಯಗಳು ಮತ್ತು ಜನದಟ್ಟಣೆಯ ಮಾರುಕಟ್ಟೆಗಳನ್ನು ಗುರಿಯಾಗಿಸಿಕೊಂಡು ಎಲ್‌ಇಟಿ ಐಇಡಿ ಸ್ಫೋಟದ ಬೆದರಿಕೆ ಹಿನ್ನೆಲೆ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.ಈ ನಡುವೆ ದೆಹಲಿ ವಿಶೇಷ ವಿಭಾಗದ ಪೊಲೀಸರು, ಸಾಮಾಜಿಕ ಮಾಧ್ಯಮದಲ್ಲಿ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ ಪೋಸ್ಟ್​ ಹಂಚಿಕೊಂಡಿದ್ದ ಆರು ಮಂದಿಯನ್ನು ಬಂಧಿಸಿದಾಗ, ಅವರು ಬಾಂಗ್ಲಾದೇಶಿ ಪ್ರಜೆಗಳು ಎಂಬುದು ತಿಳಿದುಬಂದಿದೆ.

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಕಂಡು ಅದರಜಾಡು ಹಿಡಿದ ಪೊಲೀಸರು ತಮಿಳುನಾಡಿನ ತಿರುಪುರಕ್ಕೆ ಬಂದು ಇಲ್ಲಿನ ಜಿಲ್ಲಾ ಪೊಲೀಸರ ಸಹಾಯದೊಂದಿಗೆಉತುಕುಳಿ ಪ್ರದೇಶದಲ್ಲಿ ಇಬ್ಬರು, ಪಲ್ಲಡಂನಲ್ಲಿ ಮೂವರು, ತಿರುಮುರುಗನ್‌ಪೂಂಡಿಯಲ್ಲಿ ಒಬ್ಬರನ್ನು ಬಂಧಿಸಲಾಗಿದೆ.ನಂತರ, ಅವರನ್ನು ರಹಸ್ಯ ಸ್ಥಳದಲ್ಲಿ ಇರಿಸಿ ವಿಚಾರಣೆ ನಡೆಸಲಾಯಿತು. ಆ ಸಮಯದಲ್ಲಿ, ಅವರೆಲ್ಲರೂ ಬಾಂಗ್ಲಾದೇಶದವರು ಎಂದು ತಿಳಿದುಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !