February 22, 2026
Sunday, February 22, 2026
spot_img

FOOD | ಹತ್ತೇ ನಿಮಿಷ ಸಾಕು ಈ ಬದನೆಕಾಯಿ ಮೊಸರು ಗೊಜ್ಜು ಮಾಡೋಕೆ!

ಬೇಸಿಗೆಯ ಬಿಸಿಯಲ್ಲಿ ತಂಪಾದ, ರುಚಿಕರವಾದ ಹಾಗೂ ಸರಳವಾಗಿ ತಯಾರಿಸಬಹುದಾದ ಒಂದು ಸಾಂಪ್ರದಾಯಿಕ ಅಡುಗೆ ಎಂದರೆ ಬದನೆಕಾಯಿ ಮೊಸರು ಗೊಜ್ಜು. ಕಡಿಮೆ ಮಸಾಲೆ, ಸರಳ ಒಗ್ಗರಣೆ ಮತ್ತು ಮನೆಯಲ್ಲೇ ಸಿಗುವ ಸಾಮಗ್ರಿಗಳಿಂದ ಸಿದ್ಧವಾಗುವ ಈ ಗೊಜ್ಜು, ಅನ್ನದ ಜೊತೆಗೆ ಅತ್ಯಂತ ಸವಿಯಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು:

ಮಧ್ಯಮ ಗಾತ್ರದ ಬದನೆಕಾಯಿ – 2
ಮೊಸರು – 1 ಕಪ್
ಹಸಿಮೆಣಸಿನಕಾಯಿ – 1–2
ಸಾಸಿವೆ – ½ ಚಮಚ
ಜೀರಿಗೆ – ½ ಚಮಚ
ಉದ್ದಿನ ಬೇಳೆ – 1 ಚಮಚ
ಕರಿಬೇವು – ಕೆಲವು
ಅರಿಶಿನ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ:

ಬದನೆಕಾಯಿಯನ್ನು ತೊಳೆದು ಚಿಕ್ಕ ತುಂಡುಗಳಾಗಿ ಕತ್ತರಿಸಿ.

ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಬದನೆಕಾಯಿ ತುಂಡುಗಳನ್ನು ಹಾಕಿ ಸ್ವಲ್ಪ ಅರಿಶಿನ ಹಾಗೂ ಉಪ್ಪು ಸೇರಿಸಿ ಮೃದುವಾಗುವವರೆಗೆ ಹುರಿಯಿರಿ. ಬೇರೆ ಪಾತ್ರೆಯಲ್ಲಿ ಮೊಸರು ಚೆನ್ನಾಗಿ ಗೊಟಾಯಿಸಿ. ಹುರಿದ ಬದನೆಕಾಯಿಯನ್ನು ತಣ್ಣಗಾದ ನಂತರ ಮೊಸರಿನಲ್ಲಿ ಸೇರಿಸಿ.

ಇನ್ನೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಹಸಿಮೆಣಸು ಮತ್ತು ಕರಿಬೇವು ಹಾಕಿ ಒಗ್ಗರಣೆ ಕೊಟ್ಟು, ಇದನ್ನು ಮೊಸರು-ಬದನೆಕಾಯಿ ಮಿಶ್ರಣಕ್ಕೆ ಸೇರಿಸಿ. ಮೇಲಿಂದ ಕೊತ್ತಂಬರಿ ಸೊಪ್ಪು ಹಾಕಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !