ಹೊರಗಡೆ ಹೋಟೆಲ್‌ಗಳಲ್ಲಿ ತಿನ್ನೋ ಚಿಲ್ಲಿ ಮಶ್ರೂಮ್ ರುಚಿ ಎಲ್ಲರಿಗೂ ಇಷ್ಟ. ಆದರೆ ಅದೇ ರುಚಿಯನ್ನು ಮನೆಯಲ್ಲಿ ಸುಲಭವಾಗಿ ಮಾಡಬಹುದು. ಸಂಜೆ ಸ್ನ್ಯಾಕ್ ಆಗಿರಲಿ ಅಥವಾ ಫ್ರೈಡ್ ರೈಸ್, ನೂಡಲ್ಸ್ ಜೊತೆಗೆ ಸೈಡ್ ಡಿಶ್ ಆಗಿರಲಿ ಈ ರೆಸಿಪಿ ಸೂಪರ್ ಹಿಟ್!
ಬೇಕಾಗುವ ಸಾಮಗ್ರಿಗಳು
ಮಶ್ರೂಮ್ – 200 ಗ್ರಾಂ
ಮೈದಾ – 2 ಟೇಬಲ್ ಸ್ಪೂನ್
ಕಾರ್ನ್ ಫ್ಲೋರ್ – 2 ಟೇಬಲ್ ಸ್ಪೂನ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಹಸಿಮೆಣಸು – 2
ಈರುಳ್ಳಿ –1
ಕ್ಯಾಪ್ಸಿಕಂ – 1
ಸಾಯ್ ಸಾಸ್ – 1 ಟೇಬಲ್ ಸ್ಪೂನ್
ಟೊಮ್ಯಾಟೊ ಸಾಸ್ – 1 ಟೇಬಲ್ ಸ್ಪೂನ್
ಮೆಣಸಿನ ಪುಡಿ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ಮಾಡುವ ವಿಧಾನ
ಮೊದಲು ಮಶ್ರೂಮ್‌ಗಳನ್ನು ಚೆನ್ನಾಗಿ ತೊಳೆದು ಕತ್ತರಿಸಿಕೊಳ್ಳಿ. ಒಂದು ಬಟ್ಟಲಿನಲ್ಲಿ ಮೈದಾ, ಕಾರ್ನ್ ಫ್ಲೋರ್, ಉಪ್ಪು, ಸ್ವಲ್ಪ ನೀರು ಹಾಕಿ ಹದವಾದ ಹಿಟ್ಟು ತಯಾರಿಸಿ. ಅದರಲ್ಲಿ ಮಶ್ರೂಮ್ ಹಾಕಿ ಮಿಶ್ರಣ ಮಾಡಿ ಬಿಸಿ ಎಣ್ಣೆಯಲ್ಲಿ ಫ್ರೈ ಕರಿಯಿರಿ.
ಇನ್ನೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು ಹಾಕಿ ಹುರಿಯಿರಿ. ನಂತರ ಈರುಳ್ಳಿ ಮತ್ತು ಕ್ಯಾಪ್ಸಿಕಂ ಸೇರಿಸಿ ಸ್ವಲ್ಪ ಕ್ರಂಚಿಯಾಗಿರುವಷ್ಟು ಹುರಿಯಿರಿ.
ಈಗ ಸೋಯಾ ಸಾಸ್, ಟೊಮ್ಯಾಟೊ ಸಾಸ್, ಮೆಣಸಿನ ಪುಡಿ ಸೇರಿಸಿ ಮಿಶ್ರಣ ಮಾಡಿ. ಕೊನೆಗೆ ಕರಿದ ಮಶ್ರೂಮ್ ಹಾಕಿ ಚೆನ್ನಾಗಿ ಕಲಸಿ 2 ನಿಮಿಷ ಬೇಯಿಸಿ. ಈಗ ಬಿಸಿ ಬಿಸಿ ಚಿಲ್ಲಿ ಮಶ್ರೂಮ್ ಸವಿಯಲು ರೆಡಿ!



