February 24, 2026
Tuesday, February 24, 2026
spot_img

ದಿನಭವಿಷ್ಯ: ಯೋಚಿಸಿ ನಿರ್ಧಾರ ಕೈಗೊಳ್ಳಿ,ವೃತ್ತಿಯಲ್ಲಿ ಉನ್ನತಿ, ಹೊಂದಾಣಿಕೆ ಒಳಿತು.

ಮೇಷ.
ಗ್ರಹಗತಿ ನಿಮಗೆ ಪೂರಕ. ವೃತ್ತಿಯಲ್ಲಿ ಉನ್ನತಿ. ವೈಯಕ್ತಿಕ ಚಿಂತೆ ಪರಿಹಾರದ ಲಕ್ಷಣ ತೋರಲಿದೆ. ಮುನಿಸು ದೂರ, ಸಂಬಂಧ ಹತ್ತಿರ.

ವೃಷಭ
ಇತ್ತೀಚಿನ ಕೆಲ ಕೆಲಸಗಳ ಪರಾಮರ್ಶೆ ನಡೆಸಿ. ತಪ್ಪಿದ್ದರೆ ತಿದ್ದಿಕೊಳ್ಳಿ. ಟೀಕೆಗಳಿಗೆ ನೋಯದಿರಿ. ಪ್ರಭಾವಿ ವ್ಯಕ್ತಿಗಳ ಸಂಪರ್ಕ ಸಾಧ್ಯವಾಗಲಿದೆ.

ಮಿಥುನ
ದೈಹಿಕವಾಗಿ, ಮಾನಸಿಕವಾಗಿ ಇಂದು ಬಳಲುವಷ್ಟು ಕೆಲಸ. ಆರೋಗ್ಯ ಏರುಪೇರು. ಆತ್ಮೀಯರ ಸಂಗ ನೆಮ್ಮದಿ ತರಲಿದೆ. ಧನವ್ಯಯ.

ಕಟಕ
ನಿಮ್ಮ ಮಾನಸಿಕ ದೃಢತೆ ಕೆಲವರಿಗೆ ಹೊಟ್ಟೆಯುರಿ ತರಲಿದೆ. ಪ್ರೀತಿಯ ವಿಷಯದಲ್ಲಿ ಮನಃಪರಿವರ್ತನೆ ಆದೀತು. ಆರೋಗ್ಯ ಸ್ಥಿರ.

ಸಿಂಹ
ಅಧಿಕ ಕೆಲಸದ ಒತ್ತಡ. ಸಂಗಾತಿ ಜತೆ ವಿರಸದಿಂದ ಮನಸ್ಸು ಅಶಾಂತ. ಸ್ವಂತ ಉದ್ದಿಮೆಯಲ್ಲಿ ಹಿನ್ನಡೆ ಉಂಟಾದೀತು.

ಕನ್ಯಾ
ನಿಮ್ಮ ನಿರ್ಧಾರ ದೀರ್ಘಾವಧಿ ಪರಿಣಾಮ ಬೀರಬಹುದು. ಯೋಚಿಸಿ ನಿರ್ಧಾರ ಕೈಗೊಳ್ಳಿ. ಸಣ್ಣ ವಿಷಯವೊಂದು ಮನಸ್ಸಿಗೆ ಕಿರಿಕಿರಿ ಸೃಷ್ಟಿಸಲಿದೆ.

ತುಲಾ
ವೃತ್ತಿ ಕ್ಷೇತ್ರದಲ್ಲಿ ಎಲ್ಲರನ್ನು ಪೂರ್ಣವಾಗಿ ನಂಬದಿರಿ. ಹರಿತ ವಸ್ತುಗಳ ಜತೆ ಎಚ್ಚರವಿರಲಿ.
ಆಧ್ಯಾ ತ್ಮಿಕ ಚಿಂತನೆ ಆವರಿಸಬಹುದು.

ವೃಶ್ಚಿಕ
ಸಾಮಾಜಿಕ, ಖಾಸಗಿ ಬದ್ಧತೆ ಈಡೇರಿಸಬೇಕಾದ ಒತ್ತಡ. ಎಡೆಬಿಡದ ಕೆಲಸದಿಂದ ವಿರಾಮ ಸಿಗದು. ಕೌಟುಂಬಿಕ ಶಾಂತಿಗೆ ಭಂಗ ಬಂದೀತು.

ಧನು
ಭಾವನಾತ್ಮಕ ಸವಾಲು ಎದುರಿಸುವಿರಿ. ಮನೋನಿಗ್ರಹ ಅವಶ್ಯ. ಬಹುಮುಖ್ಯ ಬಯಕೆ ಈಡೇರುವ ಕಾಲ ಬಂದಿದೆ. ಧನಪ್ರಾಪ್ತಿ.

ಮಕರ
ಅಂತಃಪ್ರೇರಣೆ ಪ್ರಕಾರ ನಡಕೊಳ್ಳಿ. ಅದು ನಿಮ್ಮನ್ನು ಉನ್ನತಿಗೆ ಕೊಂಡೊಯ್ಯಲಿದೆ. ಸಣ್ಣ ವಿಷಯಕ್ಕೆ ಜಗಳ ಕಾಯಲು ಹೋಗಬೇಡಿ.

ಕುಂಭ
ಇಂದು ತಾಳ್ಮೆ ಮುಖ್ಯ. ಪ್ರತಿಕೂಲ ಸನ್ನಿವೇಶ ಎದುರಾದರೂ ಧೃತಿಗೆಡದಿರಿ. ಬಳಿಕ ಎಲ್ಲವೂ ತಾನಾಗಿ ಸರಿಹೋಗಲಿದೆ.

ಮೀನ
ಹೊಸತಾದುದನ್ನು ಅಳವಡಿಸಲು ಸಕಾಲ. ಕೆಲ ವಿಚಾರಗಳಲ್ಲಿ ಬದಲಾವಣೆ ತಂದುಕೊಳ್ಳಿ. ಸಂಘರ್ಷದ ಮನೋಭಾವ ಬಿಡಿ. ಹೊಂದಾಣಿಕೆ ಒಳಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !