ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗ ನಗರದಲ್ಲಿ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಆರಂಭವಾಗಿದೆ. ದೂರದ ಊರುಗಳಿಂದ ನಗರಕ್ಕೆ ಜನರು ಆಗಮಿಸುತ್ತಿದ್ದು, ಇಡೀ ಊರಿನಲ್ಲಿ ಹಬ್ಬದ ವಾತಾವರಣವಿದೆ. ಆದರೆ ಹಬ್ಬದ ಸಮಯದಲ್ಲೇ ಕೆಟ್ಟ ಘಟನೆಯೊಂದು ನಡೆದುಹೋಗಿದೆ.
ಭಿನ್ನಕೋಮಿನ ಅಪ್ರಾಪ್ತ ಯುವಕರು ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ವಿದ್ಯಾರ್ಥಿಯನ್ನು ಕೊಲೆ ಮಾಡಿದ್ದಾರೆ. ಸದ್ಯ ಮಲೆನಾಡು ಸ್ತಬ್ಧವಾಗಿದೆ.
ಶಿವಮೊಗ್ಗದ ಊರಗಡೂರಿನಲ್ಲಿ ವಿದ್ಯಾರ್ಥಿ ಸಂಕೇತ್‌ನನ್ನು ಕೊಲೆ ಮಾಡಲಾಗಿದೆ. ಸ್ಪೆಷಲ್ ಕ್ಲಾಸ್ ಮುಗಿಸಿ ಬರುತ್ತಿದ್ದ ಸಂಕೇತ್ ರಸ್ತೆಯಲ್ಲಿ ತನ್ನ ಸ್ನೇಹಿತ ಗಿರೀಶ್‌ಗೆ ಯಾರೋ ಹೊಡೆಯುವುದನ್ನು ನೋಡಿದ್ದಾನೆ.
ತಕ್ಷಣ ಹೋಗಿ ಜಗಳ ಬಿಡಿಸಲು ಯತ್ನಿಸಿದ್ದಾನೆ. ಭಿನ್ನಕೋಮಿನ ಯುವಕರಿಬ್ಬರು ಸಂಕೇತ್ ಎದೆಗೆ ಬಲವಾಗಿ ಒದ್ದಿದ್ದಾರೆ. ತಕ್ಷಣವೇ ಆತ ಕುಸಿದುಬಿದ್ದಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಹಲ್ಲೆ ನಡೆಸಿದ ಹುಡುಗರಿಗೆ ಸಾಂಕೇತ್ ಪರಿಚಯ ಇತ್ತು. ಎಲ್ಲರೂ ಒಟ್ಟಿಗೇ ಸ್ಕೂಲಿಗೆ ಹೋಗುವವಾಗಿದ್ದರು. ಆದರೆ ಆರೋಪಿಗಳು ಶಾಲೆಯಿಂದ ಡ್ರಾಪ್‌ಔಟ್ ಆಗಿದ್ದರು. ಪ್ರಕರಣ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಶಿವಮೊಗ್ಗ ನಗರದಾದ್ಯಂತೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.



