June 23, 2026
Tuesday, June 23, 2026
spot_img

CINE | ವಿರೋಷ್‌ ವೈರಲ್‌, ರಶ್ಮಿಕಾ-ವಿಜಯ್‌ ಮದುವೆಯ ಫೋಟೊಗಳಿಗೆ ದಾಖಲೆಯ ವ್ಯೂಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ನಿನ್ನೆಯಷ್ಟೇ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಆತ್ಮೀಯರು, ಕುಟುಂಬದವರಿಗೆ ಮಾತ್ರ ಆಹ್ವಾನ ನೀಡಿದ್ದು, ಕೆಲವೇ ಜನರ ಸಮ್ಮುಖದಲ್ಲಿ ಸಾಂಪ್ರದಾಯಕವಾಗಿ ರಶ್ಮಿಕಾ ವಿಜಯ್‌ ಮದುವೆಯಾಗಿದ್ದಾರೆ.

ಮದುವೆಯ ಫೋಟೊ ವಿಡಿಯೋಗಳನ್ನು ಶೇರ್‌ ಮಾಡಿಕೊಳ್ಳಿ ಪ್ಲೀಸ್‌ ಎಂದು ಅಭಿಮಾನಿಗಳು ಮನವಿ ಮಾಡಿದ್ದರು. ಅಂತೆಯೇ ಸಾಮಾಜಿಕ ಜಾಲತಾಣದಲ್ಲಿ ವಿಜಯ್‌ ಹಾಗೂ ರಶ್ಮಿಕಾ ಏಕಕಾಲಕ್ಕೆ ಫೋಟೊ ಹಾಗೂ ವಿಡಿಯೋಗಳನ್ನು ಪೋಸ್ಟ್‌ ಮಾಡಿದ್ದಾರೆ.

ಇವರ ಮದುವೆ ಫೋಟೊಸ್‌ಗೆ ದಾಖಲೆಯ ವ್ಯೂಸ್‌ ಬಂದಿದೆ. ಅಭಿಮಾನಿಗಳು ಫೋಟೊಗೆ ಲೈಕ್‌ ಮಾಡಿ, ಕಮೆಂಟ್‌ ಕೂಡ ಮಾಡಿದ್ದಾರೆ. ಇಬ್ಬರ ಕ್ಯಾಪ್ಷನ್ಸ್‌ ಹಾಗೂ ಫೋಟೊಸ್‌ ಮುದ್ದಾಗಿವೆ ಎಂದಿದ್ದಾರೆ. ಸೀರೆ ಹಾಗೂ ಪಂಚೆಯಲ್ಲಿ ಜೋಡಿ ಶಿವ ಪಾರ್ವತಿಯಂತೆ ಕಾಣುತ್ತಿದೆ ಎಂದೂ ಹೇಳಿದ್ದಾರೆ.

ರಶ್ಮಿಕಾ ತಮ್ಮ ಪೇಜ್‌ನಲ್ಲಿ ಒಟ್ಟು 8 ಚಿತ್ರಗಳನ್ನು ಹಂಚಿಕೊಂಡಿದ್ದರೆ, ವಿಜಯ್‌ ದೇವರಕೊಂಡ ಒಟ್ಟು 11 ಫೋಟೋಗಳನ್ನು ಹಂಚಿಕೊಂಡಿದ್ದರು. ರಶ್ಮಿಕಾ ಮಂದಣ್ಣ ಮದುವೆ ಫೋಟೋ ಪೋಸ್ಟ್‌ಮಾಡಿದ 19 ನಿಮಿಷಕ್ಕೆ 1 ಮಿಲಿಯನ್‌ ಲೈಕ್ಸ್‌ ಪಡೆದಿದ್ದರು. ಇನ್ನು ವಿಜಯ್‌ ದೇವರಕೊಂಡ ಒಂದು ನಿಮಿಷ ತಡವಾಗಿ ಅಂದರೆ 20 ನಿಮಿಷಕ್ಕೆ 1 ಮಿಲಿಯನ್ಸ್‌ ಲೈಕ್ಸ್‌ ಪಡೆದುಕೊಂಡಿದ್ದಾರೆ. ರಶ್ಮಿಕಾ ಪೋಸ್ಟ್‌ಗೆ ಈಗ 15M ಲೈಕ್ಸ್‌ ಬಂದಿವೆ. ವಿಜಯ್‌ ಪೋಸ್ಟ್‌ಗೆ ಸದ್ಯ 12.6 M ಲೈಕ್ಸ್‌ ಬಂದಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !