April 16, 2026
Thursday, April 16, 2026
spot_img

FOOD | ಸಂಜೆ ಟೀ ಟೈಮ್‌ಗೆ ಸೂಪರ್ ಸ್ನ್ಯಾಕ್: ಕಾರ್ನ್ ಕಬಾಬ್ ಟ್ರೈ ಮಾಡಿ

ಸಂಜೆ ಹೊತ್ತಿನಲ್ಲಿ ಚಹಾ ಜೊತೆ ಏನಾದರೂ ಕ್ರಿಸ್ಪಿ, ಟೇಸ್ಟಿ ತಿನ್ಬೇಕು ಅನಿಸ್ತಾ ಇದೆಯಾ? ಹಾಗಿದ್ರೆ ಟ್ರೈ ಮಾಡಿ ಈ ಸಿಂಪಲ್ ಮತ್ತು ರುಚಿಕರ ಕಾರ್ನ್ ಕಬಾಬ್. ಮಕ್ಕಳು ಮಾತ್ರವಲ್ಲ, ದೊಡ್ಡವರಿಗೂ ಇಷ್ಟವಾಗುವ ಈ ಸ್ನ್ಯಾಕ್ ಮನೆಯಲ್ಲಿ ಸುಲಭವಾಗಿ ಮಾಡಬಹುದು.

ಬೇಕಾಗುವ ಸಾಮಗ್ರಿಗಳು:

ಸಿಹಿ ಕಾರ್ನ್ – 1 ಕಪ್
ಬೇಯಿಸಿದ ಆಲೂಗಡ್ಡೆ – 2
ಬ್ರೆಡ್ ಪುಡಿ – ½ ಕಪ್
ಹಸಿಮೆಣಸಿನಕಾಯಿ – 1
ಕೊತ್ತಂಬರಿ ಸೊಪ್ಪು – ಸ್ವಲ್ಪ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಗರಂ ಮಸಾಲಾ – ½ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಫ್ರೈ ಮಾಡಲು

ಮಾಡುವ ವಿಧಾನ:

ಮೊದಲು ಕಾರ್ನ್ ಅನ್ನು ಸ್ವಲ್ಪ ಮಿಕ್ಸಿಯಲ್ಲಿ ರಫ್ ಆಗಿ ಅರೆಯಿರಿ. ನಂತರ ಒಂದು ಬಟ್ಟಲಿನಲ್ಲಿ ಕಾರ್ನ್, ಬೇಯಿಸಿದ ಆಲೂಗಡ್ಡೆ, ಹಸಿಮೆಣಸಿನಕಾಯಿ, ಕೊತ್ತಂಬರಿ, ಮಸಾಲಾ ಪದಾರ್ಥಗಳು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.

ಈ ಮಿಶ್ರಣದಿಂದ ಚಿಕ್ಕ ಚಿಕ್ಕ ಕಬಾಬ್ ಆಕಾರ ಮಾಡಿ ಬ್ರೆಡ್ ಪುಡಿಯಲ್ಲಿ ಉರುಳಿಸಿ. ತವಾದಲ್ಲಿ ಸ್ವಲ್ಪ ಎಣ್ಣೆ ಹಾಕಿ ಎರಡೂ ಬದಿಯಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ.

ಬಿಸಿ ಬಿಸಿ ಕಾರ್ನ್ ಕಬಾಬ್ ಅನ್ನು ಹಸಿರು ಚಟ್ನಿ ಅಥವಾ ಟೊಮಾಟೊ ಸಾಸ್ ಜೊತೆ ಸರ್ವ್ ಮಾಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !