ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಯುದ್ಧದ ಭೀತಿಯ ಬೆನ್ನಲ್ಲೇ ಇರಾನ್ ಜಗತ್ತಿನ ಅತ್ಯಂತ ಪ್ರಮುಖ ತೈಲ ಮಾರ್ಗವಾದ ಹರ್ಮೂಜ್ ಜಲಸಂಧಿಯನ್ನು ಬಂದ್ ಮಾಡಿದೆ.
ಈಗಾಗಲೇ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGC) ಹಡಗುಗಳಿಗೆ ರೇಡಿಯೋ ಮೂಲಕ ಎಚ್ಚರಿಕೆ ನೀಡಿದ್ದು, ಯಾವುದೇ ಹಡಗು ಈ ಮಾರ್ಗದಲ್ಲಿ ಸಂಚರಿಸದಂತೆ ನಿರ್ಬಂಧ ವಿಧಿಸಿದೆ.
ಈ ಬೆಳವಣಿಗೆಯಿಂದ ಕಚ್ಚಾತೈಲದ ಬೆಲೆ 10% ಹೆಚ್ಚಾಗ್ತಿದ್ದು, ಬ್ಯಾರೆಲ್ ಕಚ್ಚಾತೈಲದ ಬೆಲೆ 100 ಡಾಲರ್ ದಾಟುವ ಸಾಧ್ಯತೆ ಇದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ.
ವಿಶ್ವದ ತೈಲ ಪೂರೈಕೆಯ ಪ್ರಮುಖ ಜಲಸಂಧಿ ಇದಾಗಿದ್ದು ಒಟ್ಟು ತೈಲ ಪೂರೈಕೆಯ ಸುಮಾರು ಶೇ. 20ರಿಂದ ಶೇ. 25ರಷ್ಟು ಭಾಗ ಇಲ್ಲಿಂದ ಸಾಗುತ್ತದೆ. ಪ್ರಮುಖ ರಫ್ತುದಾರರಾದ ಸೌದಿ ಅರೇಬಿಯಾ, ಇರಾಕ್, ಯುಎಇ, ಕುವೈತ್, ಕತಾರ್ ತಮ್ಮ ತೈಲ ಮತ್ತು ಎಲ್‌ಎನ್‌ಜಿ ರಫ್ತಿಗಾಗಿ ಈ ಮಾರ್ಗವನ್ನೇ ಬಳಸುತ್ತಿವೆ.
ಭಾರತದ ಮೇಲೆ ಪರಿಣಾಮ ಏನು?
ಭಾರತವು ತನ್ನ ಕಚ್ಚಾ ತೈಲದ ಶೇಕಡಾ ಶೇ.60ಕ್ಕೂ ಹೆಚ್ಚು ಭಾಗವನ್ನು ಗಲ್ಫ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಶೇ. 40-50 ರಷ್ಟು ತೈಲವು ಹರ್ಮೂಜ್ ಜಲಸಂಧಿಯ ಮೂಲಕವೇ ಭಾರತವನ್ನು ತಲುಪುತ್ತದೆ. ಈ ಮಾರ್ಗ ಬಂದ್ ಆಗಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಆಗುತ್ತೆ. ತೈಲ ಬೆಲೆಯಲ್ಲಿ 1 ಡಾಲರ್ ಏರಿಕೆಯು ಭಾರತದ ವಾರ್ಷಿಕ ಆಮದು ವೆಚ್ಚವನ್ನು ಸುಮಾರು ಅಂದಾಜು 16,500 ಕೋಟಿ ಹೆಚ್ಚಿಸುತ್ತದೆ. ಭಾರತವು ದಿನವೊಂದಕ್ಕೆ ಸುಮಾರು 26 ಲಕ್ಷ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲವನ್ನು ಈ ಜಲಸಂಧಿಯ ಮೂಲಕವೇ ಪಡೆಯುತ್ತದೆ.
ಭಾರತವು ತನ್ನ ನೈಸರ್ಗಿಕ ಅನಿಲದ ಅವಶ್ಯಕತೆಗಾಗಿ ಕತಾರ್ ದೇಶವನ್ನು ಅವಲಂಬಿಸಿದೆ.ಈ ಮಾರ್ಗ ಬಂದ್ ಆದರೆ ಭಾರತದಲ್ಲಿ ಸಿಎನ್‌ಜಿ ಮತ್ತು ಕೈಗಾರಿಕಾ ಅನಿಲ ಪೂರೈಕೆಯೂ ಸ್ಥಗಿತಗೊಳ್ಳಬಹುದು.



