Saturday, August 30, 2025

ಪ್ರಧಾನಿ ಮೋದಿ ಆಗಮನಕ್ಕೆ ಕಾತುರದಿಂದ ಕಾದು ಕುಳಿತ ಟೋಕಿಯೋದ ಭಾರತೀಯ ಅನಿವಾಸಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಗಸ್ಟ್ 29-30 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್‌ಗೆ ಭೇಟಿ ನೀಡುತ್ತಿರುವುದರಿಂದ ಅಲ್ಲಿನ ಭಾರತೀಯ ವಲಸಿಗರು ಸಂಭ್ರಮದಿಂದ ಕಾದು ಕುಳಿತ್ತಿದ್ದಾರೆ.

ಅವರ ಆಗಮನಕ್ಕೆ ಮುನ್ನ, ಟೋಕಿಯೊದಲ್ಲಿರುವ ಭಾರತೀಯ ಸಮುದಾಯವು ಒಟ್ಟಾಗಿ ಸೇರಿ, ಎ ಆರ್ ರೆಹಮಾನ್ ಸಂಯೋಜಿಸಿದ ‘ಜೈ ಹೋ’ ಎಂಬ ಬಾಲಿವುಡ್ ಗೀತೆಯನ್ನು ಹಾಡಿ ಸಂಭ್ರಮಿಸಿದೆ.

ಜಪಾನ್‌ನಲ್ಲಿರುವ ಭಾರತೀಯ ಸಮುದಾಯದ ಸದಸ್ಯ ಸುನಿಲ್ ಸೋನಿ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸುತ್ತಾ, “ಒಬ್ಬ ಭಾರತೀಯನಾಗಿ, ಪ್ರಧಾನಿ ಮೋದಿ ಇಲ್ಲಿಗೆ ಭೇಟಿ ನೀಡುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ… ಇದು ಭಾರತ-ಜಪಾನ್ ಸಂಬಂಧವನ್ನು ಬಲಪಡಿಸುತ್ತದೆ… ಭಾರತದ ಕನಸನ್ನು ನನಸಾಗಿಸಲು ಮೋದಿ ಜಿ ವಿಶ್ವ ಪ್ರವಾಸದಲ್ಲಿದ್ದಾರೆ, ಮತ್ತು ಇದಕ್ಕಾಗಿ ನಾವು ತುಂಬಾ ಸಂತೋಷಪಡುತ್ತೇವೆ… ಅವರನ್ನು ಸ್ವಾಗತಿಸಲು ನಾವು ಸಿದ್ಧರಿದ್ದೇವೆ. ಇದು ನಮಗೆ ಹೆಮ್ಮೆಯ ಕ್ಷಣ…” ಎಂದು ಹೇಳಿದ್ದಾರೆ.

“ನಾವು ಇಡೀ ಸಮುದಾಯವನ್ನು ಹೂವಿನ ಹಾರಗಳು ಮತ್ತು ತ್ರಿವರ್ಣ ಧ್ವಜದೊಂದಿಗೆ ಸ್ವಾಗತಿಸಲು ಯೋಜಿಸುತ್ತಿದ್ದೇವೆ… ಪ್ರಧಾನಿ ಮೋದಿ ಅವರ ಸ್ವಾಗತದಲ್ಲಿ ಯಾವುದೇ ದೋಷ ಇರೋದಿಲ್ಲ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ