September 27, 2026
Sunday, September 27, 2026
spot_img

ಪರೀಕ್ಷೆ ಅಂದ್ರೆ ಇಷ್ಟೊಂದು ಭಯವಾ? ಎಕ್ಸಾಂ ಬರೆಯೋಕೆ ಇಷ್ಟವಿಲ್ಲದೆ ಮನೆಬಿಟ್ರಾ ವಿದ್ಯಾರ್ಥಿನಿಯರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ನಾಪತ್ತೆ ಕೇಸ್‌ ಒಂದು ದಾಖಲಾಗಿದೆ. ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು ಪರೀಕ್ಷಾ ಸಮಯದಲ್ಲೇ ನಾಪತ್ತೆಯಾಗಿದ್ದಾರೆ.

ದ್ವಿತೀಯ ಪಿಯುಸಿ ಓದುತ್ತಿದ್ದ ತನಿಷ್ಕ ಹಾಗೂ ಪ್ರಥಮ ಪಿಯುಸಿ ಓದುತ್ತಿದ್ದ ತೇಜಸ್ವಿನಿ ಕಾಣೆಯಾಗಿದ್ದಾರೆ. ಪರೀಕ್ಷೆ ಬರೆಯುವುದನ್ನು ತಪ್ಪಿಸಿಕೊಳ್ಳಲು ಈ ರೀತಿ ಮಾಡಿದ್ದಾರಾ ಎನ್ನುವ ಅನುಮಾನ ಇದೆ.

ಒಂದು ತಿಂಗಳಿನಿಂದ ಯುವತಿಯರು ಕಾಣೆಯಾಗಿದ್ದಾರೆ. ಪೊಲೀಸರು, ಪೋಷಕರು ಹುಡುಕಾಟ ನಡೆಸುತ್ತಲೇ ಇದ್ದರೂ ಇವರಿಬ್ಬರು ಪತ್ತೆಯಾಗಿಲ್ಲ. ಮನೆಯಲ್ಲಿಯೇ ಫೋನ್‌, ಎಟಿಎಂ ಕಾರ್ಡ್‌ ಬಿಟ್ಟು ಹೋಗಿದ್ದು, ಆಧಾರ್‌ ಹಾಗೂ ಕಾಲೇಜ್‌ ಬ್ಯಾಗ್‌ನೊಂದಿಗೆ ಇಬ್ಬರು ಪರಾರಿಯಾಗಿದ್ದಾರೆ.

ಕಳೆದ ವರ್ಷ ಪರೀಕ್ಷೆ ವೇಳೆ ಇದೇ ವಿದ್ಯಾರ್ಥಿನಿಯರು ಕೈ ಕುಯ್ದುಕೊಂಡಿದ್ದರು ಎನ್ನಲಾಗಿದೆ. ಆದಷ್ಟು ಬೇಗ ಮಕ್ಕಳನ್ನು ಹುಡುಕಿಕೊಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

Must Read