August 19, 2026
Wednesday, August 19, 2026
spot_img

FOOD | ಬಾಳೆ ಹೂ ಸಿಕ್ಕಿದ್ರೆ ಬಿಸಾಡ್ಬೇಡಿ ಅದ್ರಿಂದ ರುಚಿಯಾದ ಪಲ್ಯ ರೆಡಿ ಮಾಡ್ಬಹುದು

ಬಾಳೆ ಹೂವು ಆರೋಗ್ಯಕ್ಕೆ ಬಹಳ ಉಪಕಾರಿ. ಇದು ರಕ್ತ ಶುದ್ಧೀಕರಣಕ್ಕೆ, ಹೃದಯ ಆರೋಗ್ಯಕ್ಕೆ, ಮತ್ತು ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಹೌದು, ಹೆಚ್ಚು ಜನರಿಗೆ ಬಾಳೆ ಹೂವು ಅತಿಯಾದ ಕಹಿ ಅಥವಾ ಒಗರು ಎಂದು ಭಾವಿಸುತ್ತಾರೆ. ಆದರೆ ಸರಿಯಾದ ರೀತಿಯಲ್ಲಿ ತಯಾರಿಸಿದರೆ, ಇದರ ಪಲ್ಯ ಬಹಳ ರುಚಿಯಾಗಿರುತ್ತೆ.

ಬೇಕಾಗುವ ಸಾಮಗ್ರಿಗಳು:

ಬಾಳೆ ಹೂವು – 1
ತೆಂಗಿನ ತುರಿ – 2 ಚಮಚ
ಎಳ್ಳು – 1 ಚಮಚ
ಹಸಿರು ಮೆಣಸು – 2-3
ಹುಣಸೆ ಹಣ್ಣು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಟೀ ಚಮಚ

ತಯಾರಿಸುವ ವಿಧಾನ:

ಬಾಳೆ ಹೂವಿನ ಒಳಗಿನ ಹಸಿರು ತಂತುಗಳನ್ನು ತೆಗೆದು ಸಣ್ಣದಾಗಿ ಕೊಚ್ಚಿ ನೀರಿನಲ್ಲಿ ಹಾಕಿ ನೆನೆಸಿಡಿ. ನಂತರ ನೀರು, ಉಪ್ಪು ಮತ್ತು ಅರಿಶಿನ ಹಾಕಿ ಮೃದುವಾಗುವವರೆಗೆ ಬೇಯಿಸಿಕೊಳ್ಳಿ.

ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಉದ್ದಿನಬೇಳೆ, ಕರಿಬೇವು ಮತ್ತು ಒಣ ಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ. ಬಾಳೆ ಹೂವನ್ನು ಸೇರಿಸಿ, ಬೇಕಿದ್ದರೆ ಉಪ್ಪು ಹಾಕಿ ಚನ್ನಾಗಿ ಮಿಕ್ಸ್ ಮಾಡಿ ಹುಣಸೆ ನೀರು ಹಾಗು ತೆಂಗಿನ ತುರಿ ಸೇರಿಸಿ ಕೊನೆಯದಾಗಿ ಮಿಕ್ಸ್ ಮಾಡಿದರೆ ಬಾಳೆ ಹೂ ಪಲ್ಯ ರೆಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !