March 9, 2026
Monday, March 9, 2026
spot_img

ದಿನಭವಿಷ್ಯ: ನೀವು ಮುಚ್ಚಿಟ್ಟಿರೋ ವಿಷ್ಯ ಹೊರಬರುತ್ತೆ, ಆರೋಗ್ಯ ಚೆನ್ನಾಗಿದೆ ಅಂತ ಕಡೆಗಣಿಸ್ಬೇಡಿ

ಮೇಷ
ಸಂಧಾನದ ದಾರಿಯಿಂದ ನೀವು ಕಾರ್ಯ ಸಾಧಿಸಬಲ್ಲಿರಿ. ಹಾಗಾಗಿ ಸಂಘರ್ಷದ ದಾರಿ ಏಕೆ? ವಿವೇಕದಿಂದ ಹೆಜ್ಜೆ ಇಡುವುದೊಳಿತು.
ವೃಷಭ
ನೀವು ಮುಚ್ಚಿಟ್ಟ ವಿಷಯವೊಂದು ಬಹಿರಂಗವಾದೀತು. ಪರಿಣಾಮ ಎದುರಿಸಲು ಸಜ್ಜಾಗಿ. ವಿದ್ಯಾರ್ಥಿಗಳಿಗೆ ತುಸು ಕಠಿಣ ಹಾದಿ.
ಮಿಥುನ
ಆರೋಗ್ಯ ಸ್ಥಿರ. ಪ್ರಮುಖ ಕಾರ್ಯಕ್ಕೆ ಗಮನ ಕೊಡಲು ಇದರಿಂದ ಸಹಕಾರಿ. ಕಟು ಮಾತು ಮನೆಯಲ್ಲಿ ಸಂಬಂಧ ಕೆಡಿಸಬಹುದು.
ಕಟಕ
ಇತ್ತೀಚಿನ ಸಮಸ್ಯೆ ಪರಿಹಾರ. ಅದರಿಂದ ನಿರಾಳತೆ. ಕೆಲವರ ಜತೆ ವ್ಯವಹಾರದಲ್ಲಿ ಎಚ್ಚರವಿರಲಿ. ಜಗಳ, ನಷ್ಟ ಉಂಟಾದೀತು.
ಸಿಂಹ
ನೀವು ಹಿಡಿದ ದಾರಿ ಖಚಿತವಾಗಿರಲಿ. ಗೊಂದಲ ಬೇಡ. ಕೋಪ ನಿಮ್ಮ ಕೆಲಸ ಕೆಡಿಸದಂತೆ ಎಚ್ಚರ ವಹಿಸಿ. ತಾಳ್ಮೆಯ ವರ್ತನೆ ಅಗತ್ಯ.
ಕನ್ಯಾ
ಇಂದು ಚಿಂತಿಸುವ ಪ್ರಮೇಯ ಉದ್ಭವಿಸದು. ಎಲ್ಲವೂ ನಿರಾಳ. ವೃತ್ತಿ ಕಾರ್ಯ ಸುಲಲಿತ. ಆಪ್ತರ ಸಾಧನೆ ಸಂತೋಷ ತರಲಿದೆ. ಧನಪ್ರಾಪ್ತಿ.
ತುಲಾ
ವ್ಯವಹಾರದಲ್ಲಿ ಹೊಸ ಅವಕಾಶ ವ್ಯರ್ಥ ಮಾಡಬೇಡಿ. ಉದ್ಯಮ ಒತ್ತಡ ಹೆಚ್ಚಳ. ಆರೋಗ್ಯ ಕಡೆಗಣಿಸಬೇಡಿ. ದೇಹ, ಮನಸ್ಸಿಗೆ ವಿರಾಮ ನೀಡಿ.
ವೃಶ್ಚಿಕ
ಆರೋಗ್ಯಕ್ಕೆ ಗಮನ ಕೊಡಿ. ಸಂಗಾತಿ ಜತೆ ಕಲಹ ನಡೆದೀತು. ವೃತ್ತಿಯಲ್ಲಿ ಏರುಪೇರು ಸಂಭವ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಯಶಸ್ಸು.
ಧನು
ಆರಾಮದ ಬದುಕಿಗೆ ಧಕ್ಕೆ ಒದಗುವ ಪ್ರಸಂಗ ಉಂಟಾದೀತು. ದಿನವಿಡೀ ಓಡಾಟ ನಡೆಸುವ ಪರಿಸ್ಥಿತಿ. ಆಗದವರನ್ನು ಓಲೈಸಲು ಹೋಗಬೇಡಿ.
ಮಕರ
ನಿಮ್ಮ ಗುರಿಸಾಧನೆಗೆ ಅಡ್ಡಿಗಳು ಒದಗಬಹುದು. ಅನವಶ್ಯ ಮಾತು ಕಡಿಮೆಗೊಳಿಸಿ. ವೃತ್ತಿ ಸಂಬಂಧ ಪ್ರಯಾಣ. ವಿದ್ಯಾರ್ಥಿಗಳಿಗೆ ಯಶ.
ಕುಂಭ
ಹಳೆಯ ಸಮಸ್ಯೆ ಮತ್ತೆ ಕಾಡಬಹುದು. ಪರಿಹಾರದ ಪ್ರಯತ್ನಕ್ಕೆ ಕೆಲವರ ಅಡ್ಡಿ. ಅನವಶ್ಯ ಖರ್ಚು ತಗ್ಗಿಸಿ. ಕೌಟುಂಬಿಕ ಸಹಕಾರ.
ಮೀನ
ದುಬಾರಿ ವಸ್ತು ಖರೀದಿಯ ಅವಕಾಶ. ವ್ಯವಹಾರದಲ್ಲಿ ಉನ್ನತಿ. ಆದರೂ ಮಾನಸಿಕ ಒತ್ತಡ ನಿವಾರಣೆಯಾಗದು. ಕೌಟುಂಬಿಕ ಉದ್ವಿಗ್ನತೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !