ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಪಾನೀಯಗಳ ಕಡೆ ಜನರು ಹೆಚ್ಚು ಗಮನ ಹರಿಸುತ್ತಿದ್ದಾರೆ. ಅಂಥ ಆರೋಗ್ಯಕರ ಮತ್ತು ಸುಲಭವಾಗಿ ತಯಾರಿಸಬಹುದಾದ ಪಾನೀಯಗಳಲ್ಲಿ ಮಖಾನಾ ಶೇಕ್ ಕೂಡ ಒಂದು. ಮಖಾನಾದಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಹಾಗೂ ಫೈಬರ್ ಹೆಚ್ಚು ಇರುವುದರಿಂದ ದೇಹಕ್ಕೆ ಶಕ್ತಿ ನೀಡುತ್ತದೆ. ಮನೆಯಲ್ಲೇ ಕೆಲವೇ ಪದಾರ್ಥಗಳಿಂದ ಈ ರುಚಿಯಾದ ಶೇಕ್ ತಯಾರಿಸಿ ಕುಡಿಯಬಹುದು.
ಬೇಕಾಗುವ ಪದಾರ್ಥಗಳು
ಮಖಾನಾ – 1 ಕಪ್
ಹಾಲು – 2 ಕಪ್
ಸಕ್ಕರೆ ಅಥವಾ ಜೇನು – 2 ಚಮಚ
ಏಲಕ್ಕಿ ಪುಡಿ – 1 ಚಿಟಿಕೆ
ಬಾದಾಮಿ ಅಥವಾ ಗೋಡಂಬಿ – 5 ರಿಂದ 6
ಐಸ್ ಕ್ಯೂಬ್‌ಗಳು – ಅಗತ್ಯವಿದ್ದಷ್ಟು
ಮಾಡುವ ವಿಧಾನ
ಮೊದಲು ಒಂದು ಪ್ಯಾನ್‌ನಲ್ಲಿ ಮಖಾನಾವನ್ನು ಸ್ವಲ್ಪ ಹೊತ್ತು ತುಪ್ಪ ಅಥವಾ ಹಾಗೆಯೇ ಡ್ರೈ ಫ್ರೈ ಮಾಡಿ. ನಂತರ ಅದು ತಣ್ಣಗಾದ ಮೇಲೆ ಮಿಕ್ಸಿ ಜಾರಿನಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ.
ಆಮೇಲೆ ಅದಕ್ಕೆ ಹಾಲು, ಸಕ್ಕರೆ ಅಥವಾ ಜೇನು, ಏಲಕ್ಕಿ ಪುಡಿ ಹಾಗೂ ಬಾದಾಮಿ ಸೇರಿಸಿ ಚೆನ್ನಾಗಿ ಗ್ರೈಂಡ್ ಮಾಡಿ. ಅಗತ್ಯವಿದ್ದರೆ ಐಸ್ ಕ್ಯೂಬ್‌ಗಳನ್ನು ಸೇರಿಸಿ ಮತ್ತೊಮ್ಮೆ ಮಿಕ್ಸಿ ಮಾಡಿ.
ಈಗ ರುಚಿಯಾದ ಮತ್ತು ಆರೋಗ್ಯಕರ ಮಖಾನಾ ಶೇಕ್ ಸಿದ್ಧ. ಗ್ಲಾಸ್‌ಗೆ ಹಾಕಿ ಮೇಲಿಂದ ಸ್ವಲ್ಪ ಡ್ರೈಫ್ರೂಟ್ಸ್ ಹಾಕಿ ಸರ್ವ್ ಮಾಡಿದರೆ ಇನ್ನೂ ರುಚಿಯಾಗಿರುತ್ತದೆ.



