January19, 2026
Monday, January 19, 2026
spot_img

Home Remedies | ಮೈಕೈಯಲ್ಲಿ ಸಿಕ್ಕಾಪಟ್ಟೆ ತುರಿಕೆ ಆಗ್ತಿದ್ಯಾ? ಹಾಗಿದ್ರೆ ಈ ಮನೆಮದ್ದು ಟ್ರೈ ಮಾಡಿ!

ಚರ್ಮದಲ್ಲಿ ತುರಿಕೆ ಯಾರಿಗಾದರೂ ಯಾವಾಗ ಬೇಕಾದರೂ ಬಂದು ತೊಂದರೆ ಕೊಡಬಹುದು. ಅಲರ್ಜಿ, ಒಣಚರ್ಮ, ಕೀಟ ಕಚ್ಚಿರುವುದು, ಅಥವಾ ಹವಾಮಾನ ಬದಲಾವಣೆ ಇವು ಮುಖ್ಯ ಕಾರಣಗಳಾಗಿರಬಹುದು. ಸಾಮಾನ್ಯವಾಗಿ ತುರಿಕೆ ಗಂಭೀರ ಸಮಸ್ಯೆಯಲ್ಲ, ಆದರೆ ನಿರಂತರವಾಗಿದ್ದರೆ ಅಥವಾ ಚರ್ಮದಲ್ಲಿ ಊತ, ಕೆಂಪು ಕಲೆಗಳು ಕಂಡುಬಂದರೆ ವೈದ್ಯಕೀಯ ಸಲಹೆ ಅಗತ್ಯ. ಆದರೆ ಸಣ್ಣ ಪ್ರಮಾಣದ ಕೊರತೆಯನ್ನು ಮನೆಮದ್ದುಗಳಿಂದಲೇ ಸುಲಭವಾಗಿ ಕಡಿಮೆ ಮಾಡಬಹುದು.

ಚರ್ಮದ ತುರಿಕೆಯನ್ನು ತಣಿಸಲು ತಣ್ಣನೆಯ ನೀರಿನಲ್ಲಿ ತೋಯಿಸಿದ ಬಟ್ಟೆಯನ್ನು ಅದರ ಮೇಲೆ ಇಟ್ಟರೆ ತಕ್ಷಣದ ಪರಿಹಾರ ನೀಡುತ್ತದೆ.

ಹಾಲಿನ ಕ್ರೀಮ್ ಅಥವಾ ಅಲೋವೆರಾ ಜೆಲ್ ಹಚ್ಚುವುದರಿಂದ ಚರ್ಮ ತಂಪಾಗಿ ಉರಿಯೂತ ಕಡಿಮೆಯಾಗುತ್ತದೆ.

ಓಟ್ಸ್ ಹಿಟ್ಟಿನಿಂದ ತಯಾರಿಸಿದ ಪೇಸ್ಟ್ ಚರ್ಮದ ತುರಿಕೆಯನ್ನು ಕಡಿಮೆ ಮಾಡುತ್ತದೆ.

ತೆಂಗಿನ ಎಣ್ಣೆ, ಆಲಿವ್ ಎಣ್ಣೆ ಅಥವಾ ಬಾದಾಮಿ ಎಣ್ಣೆ ಹಚ್ಚುವುದರಿಂದ ಚರ್ಮ ಮೃದುವಾಗಿ ಒಣತನದಿಂದ ಬರುವ ತುರಿಕೆಯನ್ನು ತಡೆಯುತ್ತದೆ.

ನಿಂಬೆ ರಸದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸಹ ತುರಿಕೆಯನ್ನು ತಣಿಸಲು ಸಹಕಾರಿ.

Must Read