ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಪುರುಷರ ಹಾಕಿ ತಂಡವು ಚೀನಾ ವಿರುದ್ಧ ಗೆಲುವಿನ ಶುಭಾರಂಭ ಮಾಡಿದೆ. ತನಗಿಂತ ಕೆಳ ಕ್ರಮಾಂಕದ ಚೀನಾ ತಂಡದ ವಿರುದ್ಧ 4-3 ಗೋಲ್ ಅಂತರದಿಂದ ಗೆದ್ದುಬೀಗಿತು.
ಈ ಪಂದ್ಯದಲ್ಲಿ ಚೀನಾ ಆರಂಭಿಕ ಮುನ್ನಡೆ ಸಾಧಿಸಿರೂ ಆ ಬಳಿಕ ಹರ್ಮನ್‌ಪ್ರೀತ್ ಸಿಂಗ್ ಅವರು ಪೆನಾಲ್ಟಿ ಕಾರ್ನರ್‌ನಲ್ಲಿ ಬಾರಿಸಿದ ಗೋಲಿನ ನೆರವಿನಿಂದ ಭಾರತ ಗೆಲುವಿನ ನಗೆ ಬೀರಿತು.
ಚೀನಾ ಮೊದಲ ಕ್ವಾರ್ಟರ್‌ನ 12ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆಯಿತು. ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಡು ಶಿಹಾವೊ ಗೋಲು ಬಾರಿಸುವ ಮೂಲಕ ಚೀನಾಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು. ಆದರೆ ದ್ವಿತೀಯ ಕ್ವಾರ್ಟರ್‌ನಲ್ಲಿ ತಿರುಗಿಬಿದ್ದ ಭಾರತ ಸತತವಾಗಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ಮುನ್ನಡೆ ಸಾಧಿಸಿತು. ಮೊದಲ ಗೋಲ್ ಹಾರ್ದಿಕ್ ಸಿಂಗ್ ಬಾರಿಸಿದರೆ, ದ್ವಿತೀಯ ಗೋಲನ್ನು ನಾಯಕ ಹರ್ಮನ್‌ಪ್ರೀತ್ ಸಿಂಗ್ ಗಳಿಸಿದರು. ಮೊದಲಾರ್ಧ 2-1 ಅಂತರದಿಂದ ಕೊನೆಗೊಂಡಿತು.
ಭಾರತ ಮುಂದಿನ ಪಂದ್ಯವನ್ನು ಸೆಪ್ಟೆಂಬರ್ 1 ರಂದು ಜಪಾನ್ ವಿರುದ್ಧ ಆಡಲಿದೆ.