March 11, 2026
Wednesday, March 11, 2026
spot_img

ಕೊಲೆ ಆರೋಪಿಗೆ 68 ಬಾರಿ ಮಚ್ಚೇಟು ಕೊಟ್ಟು ರಸ್ತೆಯಲ್ಲೇ ಕುಣಿದು ಕುಪ್ಪಳಿಸಿದ ಗ್ಯಾಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನಲ್ಲಿ ರೌಡಿಗಳ ಹಾಡಹಗಲೇ ವ್ಯಕ್ತಿಯೊಬ್ಬನ ಮೇಲೆ ಭೀಕರ ಹಲ್ಲೆ ನಡೆಸಿದ ಘಟನೆ ಮಾಗಡಿ ರೋಡ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

68 ಬಾರಿ ಮಚ್ಚಿನಿಂದ ಹೊಡೆದು ಮನಸೋ ಇಚ್ಚೆ ಥಳಿಸಿದ್ದಾರೆ. ಬಳಿಕ ಕುಣಿದು ಕುಪ್ಪಳಿಸಿದ್ದಾರೆ. 68 ಬಾರಿ ಮಚ್ಚೇಟು ಬಿದ್ರು ಅದೃಷ್ಟವಶಾತ್​ ಸಂತೋಷ್ ಜೀವ ಉಳಿದಿದೆ. ಮಚ್ಚಿನಿಂದ ಚುಚ್ಚಿದ ದುಷ್ಕರ್ಮಿಗಳು ಬಳಿಕ ಡ್ಯಾನ್ಸ್ ಮಾಡಿ ವಿಕೃತಿ ಮೆರೆದಿದ್ದಾರೆ. ಶರತ್ ಆ್ಯಂಡ್​​ ಗ್ಯಾಂಗ್ ನಿಂದ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ.

ಅಣ್ಣನ ಕೊಲೆಯ ಪ್ರತೀಕಾರಕ್ಕೆ ಮಾರಕಾಸ್ತ್ರದಿಂದ ಅಗ್ರಹಾರ ದಾಸರಹಳ್ಳಿ ನಿವಾಸಿ ಸಂತೋಷ್ ಮೇಲೆ ಶರತ್ ಅಂಡ್ ಗ್ಯಾಂಗ್​ ಅಟ್ಯಾಕ್ ಮಾಡಿ ಕೊಲೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. 2024ರಲ್ಲಿ ಸಂತೋಷ್​​ನಿಂದ ಮೋಹನ್ ಎಂಬಾತನ ಕೊಲೆ ನಡೆದಿತ್ತು. ಕಾರಿನ ವಿಚಾರಕ್ಕೆ ಇಬ್ಬರ ನಡುವೆ ಬೆಂಗಳೂರಿನಲ್ಲಿ ಗಲಾಟೆ ನಡೆದಿದೆ. ಈ ವೇಳೆ ಮಂಡ್ಯದಲ್ಲಿ ಕುಡಿದು ಕೊಳ್ಳೇಗಾಲಕ್ಕೆ ಹೋಗಿ ಗಲಾಟೆ ಮಾಡಿದ್ದ ಸಂತೋಷ್ ಮೋಹನ್ ಗೆ ಕಾಲಿಂದ ಒದ್ದು ಕೊಲೆ ಮಾಡಿದ್ದನಂತೆ. ಬಳಿಕ ಕೊಳ್ಳೆಗಾಲದ ಕೆರೆಯಲ್ಲಿ ಮೃತದೇಹವನ್ನು ಬಿಸಾಡಿ ಹೋಗಿದ್ದ ಎನ್ನಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !