ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಸೋಲೊಪ್ಪಿದ ಬೆನ್ನಲ್ಲೇ, ಸ್ಪೀಕರ್ ಓಂ ಬಿರ್ಲಾ ಇಂದು ತಮ್ಮ ಕರ್ತವ್ಯಕ್ಕೆ ಮರಳಿದ್ದಾರೆ. ವಿರೋಧ ಪಕ್ಷಗಳು ಮಾಡಿದ್ದ ‘ಪಕ್ಷಪಾತ’ದ ಆರೋಪಗಳನ್ನು ತಳ್ಳಿಹಾಕಿರುವ ಅವರು, ಸದನದ ನಿಯಮಗಳೇ ಸುಪ್ರೀಂ ಎಂದು ಸಾರಿದ್ದಾರೆ.
ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂಬ ಆರೋಪವನ್ನು ಸ್ಪೀಕರ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
“ಲೋಕಸಭೆಯ ನಿಯಮಗಳಿಗಿಂತ ಯಾರೂ ಮೇಲಲ್ಲ. ಪ್ರತಿಯೊಬ್ಬ ಸಂಸದರಿಗೂ ಮಾತನಾಡಲು ಹಕ್ಕಿದೆ, ಆದರೆ ಅದು ಸದನದ ನಿಯಮಾವಳಿಗಳಿಗೆ ಒಳಪಟ್ಟಿರಬೇಕು” ಎಂದು ಓಂ ಬಿರ್ಲಾ ಪ್ರತಿಪಾದಿಸಿದ್ದಾರೆ.
ಬಜೆಟ್ ಅಧಿವೇಶನದ ಮೊದಲ ಭಾಗದಲ್ಲಿ ಅವಿಶ್ವಾಸ ನಿರ್ಣಯದ ನೋಟಿಸ್ ಸಲ್ಲಿಕೆಯಾದ ನಂತರ, ಇಂದು ಓಂ ಬಿರ್ಲಾ ಅವರು ಮೊದಲ ಬಾರಿಗೆ ಸದನಕ್ಕೆ ಆಗಮಿಸಿ ಕಲಾಪ ನಡೆಸಿಕೊಟ್ಟರು.
ತಾವು ಎಂದಿಗೂ ಯಾವುದೇ ಒಂದು ಪಕ್ಷದ ಪರವಾಗಿ ಕೆಲಸ ಮಾಡಿಲ್ಲ ಮತ್ತು ಎಲ್ಲರಿಗೂ ಸಮಾನ ಅವಕಾಶ ನೀಡಲು ಶ್ರಮಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.



