May 1, 2026
Friday, May 1, 2026
spot_img

IceCream | ಗಂಟಲಿನಿಂದ ಇಳಿವಾಗ ಆತ್ಮ ತೃಪ್ತಿಯಾಗುತ್ತೆ: ಬೋಡಾ… ಬೊಂಡ ಐಸ್ ಕ್ರೀಮ್

ಬೇಸಿಗೆ ಬಂದಾಕ್ಷಣ ತಂಪಾದ ಪಾನೀಯಗಳು ಮತ್ತು ಐಸ್ ಕ್ರೀಮ್ ತಿನ್ನಬೇಕೆಂಬ ಆಸೆ ಜಾಸ್ತಿಯಾಗುತ್ತೆ. ಅಂತಹ ಸಮಯದಲ್ಲಿ ಆರೋಗ್ಯಕರವಾಗಿರುವ ಡೆಸರ್ಟ್ ಅಂದ್ರೆ ಎಳೆನೀರು ಐಸ್ ಕ್ರೀಮ್. ಮನೆಲ್ಲೇ ಜಾಸ್ತಿ ಖರ್ಚಿಲ್ಲದೆ ಸುಲಭವಾಗಿ ತಯಾರಿಸಬಹುದಾದ ಈ ಐಸ್ ಕ್ರೀಮ್ ಮಕ್ಕಳಿಗಂತೂ ಪಂಚಪ್ರಾಣ.

ಬೇಕಾಗುವ ಪದಾರ್ಥಗಳು

ಎಳೆನೀರು (Tender Coconut Water) – 1 ಕಪ್
ಎಳೆನೀರಿನ ಗಂಜಿ – 1 ಕಪ್
ಫ್ರೆಶ್ ಕ್ರೀಮ್ – 1 ಕಪ್
ಕಾಂಡೆನ್ಸ್ಡ್ ಮಿಲ್ಕ್ – ½ ಕಪ್
ಸಕ್ಕರೆ – 2 ಟೇಬಲ್ ಸ್ಪೂನ್ (ಐಚ್ಛಿಕ)
ವೆನಿಲ್ಲಾ ಎಸೆನ್ಸ್ – ½ ಟೀ ಸ್ಪೂನ್

ಮಾಡುವ ವಿಧಾನ

ಮೊದಲು ಎಳೆನೀರಿನ ಗಂಜಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಇಟ್ಟುಕೊಳ್ಳಿ. ನಂತರ ಮಿಕ್ಸಿ ಜಾರಿನಲ್ಲಿ ಎಳೆನೀರು, ಕ್ರೀಮ್ ಮತ್ತು ಕಾಂಡೆನ್ಸ್ಡ್ ಮಿಲ್ಕ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಈ ಮಿಶ್ರಣಕ್ಕೆ ವೆನಿಲ್ಲಾ ಎಸೆನ್ಸ್ ಮತ್ತು ಎಳೆನೀರಿನ ತುಂಡುಗಳನ್ನು ಸೇರಿಸಿ ಮತ್ತೆ ಸ್ವಲ್ಪ ಮಿಶ್ರಣ ಮಾಡಿಕೊಳ್ಳಿ. ಸಿಹಿ ಕಡಿಮೆ ಅನ್ನಿಸಿದರೆ ಸ್ವಲ್ಪ ಸಕ್ಕರೆ ಸೇರಿಸಬಹುದು.

ಈ ಮಿಶ್ರಣವನ್ನು ಏರ್‌ಟೈಟ್ ಡಬ್ಬಿಯಲ್ಲಿ ಹಾಕಿ ಫ್ರೀಜರ್‌ನಲ್ಲಿ 6–8 ಗಂಟೆಗಳ ಕಾಲ ಗಟ್ಟಿಯಾಗಲು ಇಡಿ. ಮಧ್ಯದಲ್ಲಿ ಒಂದು ಬಾರಿ ತೆಗೆದು ಚೆನ್ನಾಗಿ ಕಲಸಿ ಮತ್ತೆ ಫ್ರೀಜರ್‌ ನಲ್ಲಿ ಇಟ್ಟರೆ ಐಸ್ ಕ್ರೀಮ್ ಮೃದುವಾಗಿರುತ್ತದೆ.

ಗಟ್ಟಿಯಾದ ನಂತರ ಸ್ಕೂಪ್ ಮಾಡಿ ಸರ್ವ್ ಮಾಡಿದರೆ ತಂಪಾದ,ಎಳೆನೀರು ಐಸ್ ಕ್ರೀಮ್ ಸವಿಯಲು ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !