ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಸ್ ನಿಲ್ದಾಣದಲ್ಲಿ ನವವಿವಾಹಿತೆ ತನ್ನ ಪತಿಗೆ ಹಸಿವಾಗ್ತಿದೆ ಪಕೋಡಾ ತನ್ನಿ ಎಂದು ಹೇಳಿ ತನ್ನ ಪ್ರಿಯತಮನ ಜೊತೆ ಎಸ್ಕೇಪ್ ಆಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮೊರಾದಾಬಾದ್‌ನ ಅಮ್ರೋಹಾ ಜಿಲ್ಲೆಯ ನಿವಾಸಿ ಪ್ರೀತಮ್ ಸಿಂಗ್‌ಗೆ ಪತ್ನಿ ರಿಮ್‌ಜಿಮ್ ಮೋಸ ಮಾಡಿ ಪರಾರಿಯಾಗಿದ್ದಾಳೆ. ಹೋಳಿ ಹಬ್ಬದ ನಿಮಿತ್ತ ನವವಿವಾಹಿತೆ ರಿಮ್ಜಿಮ್ ತನ್ನ ತವರು ಮನೆಗೆ ಹೋಗುವುದಾಗಿ ಪತಿ ಪ್ರೀತಮ್ ಸಿಂಗ್ ಹೇಳಿದ್ದಳು. ಅದರಂತೆ ಆಕೆಯನ್ನು ತವರುಮನೆಗೆ ಕಳುಹಿಸಲಾಗಿತ್ತು.
ಮಾರ್ಚ್ 9 ರಂದು ಪ್ರೀತಮ್ ಸಿಂಗ್ ತನ್ನ ಪತ್ನಿಯನ್ನು ವಾಪಸ್ ಕರೆತರಲು ಹೋಗಿದ್ದ. ಅದರಂತೆ ಪತ್ನಿಯನ್ನು ಬಸ್ ನಲ್ಲಿ ಕರೆತರುವಾಗ ಬೇರೊಂದು ಬಸ್ ಬದಲಾವಣೆ ಮಾಡಿಕೊಳ್ಳಲು ಬಿಲಾರಿ ಬಸ್ ನಿಲ್ದಾಣದಲ್ಲಿ ಇಳಿದಿದ್ದಾರೆ.
ನನಗೆ ಹಸಿವಾಗ್ತಿದೆ. ಪಕೋಡಾ ತನ್ನಿ ಎಂದು ರಿಮ್‌ಜಿಮ್ ಹೇಳಿದ್ದಾಳೆ. ಪತಿ ಒಪ್ಪಿಕೊಂಡು ಪಕೋಡ ಜತೆ ಬಸ್ ಸ್ಟಾಂಡ್‌ಗೆ ಬಂದಾಗ ರಿಮ್‌ಜಿಮ್ ಇರಲಿಲ್ಲ. ಬಾತ್‌ರೂಮ್‌ಗೆ ಹೋಗಿರಬಹುದು ಎಂದು ಪತಿ ಸ್ವಲ್ಪ ಸಮಯ ಕಾದಿದ್ದಾರೆ. ಆದರೂ ಆಕೆ ಬಂದಿಲ್ಲ. ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ಅಲ್ಲದೆ ದೂರಿನಲ್ಲಿ ತನ್ನ ಹೆಂಡತಿ ತನ್ನ ಆಕೆಯ ತವರು ಹಳ್ಳಿಯ ಯುವಕನೊಂದಿಗೆ ಪರಾರಿಯಾಗಿರಬಹುದು ಎಂದು ಶಂಕಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಸ್ ನಿಲ್ದಾಣದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಪ್ರಾರಂಭಿಸಿದ್ದಾರೆ.



