March 15, 2026
Sunday, March 15, 2026
spot_img

Summer Drinks | ಸುಡು ಸುಡು ಬಿಸಿಲಿಗೆ ಕುಡಿಯಿರಿ ತಣ್ಣನೆಯ ಆಪಲ್ ಮಿಲ್ಕ್ ಶೇಕ್

ಹಣ್ಣುಗಳಿಂದ ತಯಾರಿಸುವ ಮಿಲ್ಕ್ ಶೇಕ್‌ಗಳು ಆರೋಗ್ಯಕರವಾಗಿಯೂ ರುಚಿಕರವಾಗಿಯೂ ಇರುತ್ತವೆ. ಅವುಗಳಲ್ಲಿ ಆಪಲ್ ಮಿಲ್ಕ್ ಶೇಕ್ ಗೆ ಫಸ್ಟ್ ಪ್ಲೇಸ್. ಬೆಳಗಿನ ಉಪಾಹಾರ ಸಮಯದಲ್ಲೂ ಅಥವಾ ಬೇಸಿಗೆಯ ಬಿಸಿಲಿನಲ್ಲಿ ಇದನ್ನು ತಂಪಾದ ಪಾನೀಯವಾಗಿ ಕುಡಿಯಬಹುದು.

ಬೇಕಾಗುವ ಪದಾರ್ಥಗಳು

ಆಪಲ್ – 1
ತಣ್ಣನೆಯ ಹಾಲು – 1 ಗ್ಲಾಸ್
ಸಕ್ಕರೆ – 2 ಚಮಚ (ಅವಶ್ಯಕತೆ ಅನುಸಾರ)
ಐಸ್ ಕ್ಯೂಬ್‌ಗಳು – 3 ರಿಂದ 4
ವ್ಯಾನಿಲ್ಲಾ ಐಸ್ ಕ್ರೀಂ – 1 ಸ್ಕೂಪ್ (ಬೇಕಿದ್ದರೆ)

ಮಾಡುವ ವಿಧಾನ

ಮೊದಲು ಆಪಲ್ ಹಣ್ಣನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ.

ನಂತರ ಮಿಕ್ಸಿ ಜಾರಿಗೆ ಕತ್ತರಿಸಿದ ಆಪಲ್ ತುಂಡುಗಳು, ತಣ್ಣನೆಯ ಹಾಲು, ಸಕ್ಕರೆ ಮತ್ತು ಐಸ್ ಕ್ಯೂಬ್‌ಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಮೃದುವಾಗಿ ಮಿಲ್ಕ್ ಶೇಕ್ ಆಗುವವರೆಗೆ ಗ್ರೈಂಡ್ ಮಾಡಿದ ಬಳಿಕ ಗ್ಲಾಸ್‌ಗೆ ಸುರಿಯಿರಿ.

ಮೇಲಿನಿಂದ ಒಂದು ಸ್ಕೂಪ್ ವ್ಯಾನಿಲ್ಲಾ ಐಸ್ ಕ್ರೀಂ ಹಾಕಿದರೆ ರುಚಿ ಇನ್ನಷ್ಟು ಹೆಚ್ಚಾಗುತ್ತದೆ.

ಇದೀಗ ತಂಪಾದ ಮತ್ತು ರುಚಿಕರವಾದ ಆಪಲ್ ಮಿಲ್ಕ್ ಶೇಕ್ ಸವಿಯಲು ಸಿದ್ಧವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !