Sunday, August 31, 2025

ಥಲಸ್ಸೇಮಿಯಾ ರೋಗಿಗಳ ಬೆಂಬಲಕ್ಕೆ ನಿಂತ ‘ಸತ್ವ ಸಂಕಲ್ಪ್‌’: 350 ಯುನಿಟ್ ರಕ್ತ ಸಂಗ್ರಹ

ಥಲಸ್ಸೇಮಿಯಾ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಸತ್ವ ಗ್ರೂಪ್‌ ಸಂಕಲ್ಪ್ ಇಂಡಿಯಾ ಫೌಂಡೇಶನ್‌ ಸಹಭಾಗಿತ್ವದಲ್ಲಿ ಮೂರು ತಿಂಗಳ ಕಾಲ ರಕ್ತದಾನ ಶಿಬಿರ ಆಯೋಜಿಸಿದ್ದು 350 ಕ್ಕೂ ಅಧಿಕ ಯುನಿಟ್‌ ರಕ್ತ ಸಂಗ್ರಹ ಮಾಡಿದೆ. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಸತ್ವ ಗ್ರೂಪ್‌ ವಿಶ್ವ ಥಲಸ್ಸೇಮಿಯಾ ದಿನದಂದು ಸತ್ವ ನಾಲೆಡ್ಜ್‌ ಕೋರ್ಟ್ನಲ್ಲಿರಕ್ತದಾನಶಿಬಿರವನ್ನುಆರಂಭಿಸಿತ್ತು. ಬಳಿಕ, ಸತ್ವ ಮೈಂಡ್‌ ಕಾಂಪ್‌ ಟೆಕ್ ಪಾರ್ಕ್, ಸತ್ವ ಗ್ಲೋಬಲ್ ಸಿಟಿ ಯಲ್ಲಿ ಕೂಡ ಸ್ವಯಂಪ್ರೇರಿತ ರಕ್ತದಾನ ಅಭಿಯಾನವನ್ನು ಆಯೋಜಿಸಲಾಗಿತ್ತು. ಈ ಅಭಿಯಾನ ಸತತ ಮೂರು ತಿಂಗಳುಗಳ ಕಾಲ ನಡೆದಿದ್ದು ಸಾಕಷ್ಟು ರಕ್ತದಾನಿಗಳಿಗೆ ಅವಕಾಶ ಮಾಡಿಕೊಟ್ಟಿದೆ. ಕೊನೆಯ ಹಂತದ ಅಭಿಯಾನ ಜುಲೈ 24ರಂದು ಸತ್ವ ಸಾಫ್ಟ್‌ಜೋನ್‌ ಟೆಕ್‌ಪಾರ್ಕ್‌ನಲ್ಲಿ ನಡೆದಿದ್ದು ಅಭಿಯಾನಕ್ಕೆ ತೆರೆಬಿದ್ದಿದೆ.

ಅಭಿಯಾನದ ಕುರಿತು ಮಾತನಾಡಿದ ಸತ್ವ ಗ್ರೂಪ್‌ನ ಕಾರ್ಯತಂತ್ರ ಮತ್ತು ಬೆಳವಣಿಗೆ-ಉಪಾಧ್ಯಕ್ಷ ಶಿವಂ ಅಗರ್ವಾಲ್ “ ಈ ಅಭಿಯಾನವು ಹೇಗೆ ವ್ಯಾಪಾರ ಸಂಸ್ಥೆಗಳು ಅರ್ಥಪೂರ್ಣ ಸಾಮಾಜಿಕ ಬದಲಾವಣೆಗೆ ಕಾರಣವಾಗಬಲ್ಲವು ಎಂಬುದಕ್ಕೆ ಉದಾಹರಣೆಯಾಗಿದೆ. ನಮ್ಮ ಕಾರ್ಪೋರೇಟ್‌ ಟೆನೆನ್ಟ್‌ (ಬಾಡಿಗೆದಾರರನ್ನು)ಗಳನ್ನು ಇಂತಹ ಸಾಮಾಜಿಕ ಜವಾಬ್ದಾರಿಯ ಕಾರಣಕ್ಕೆ ಒಟ್ಟುಗೂಡಿಸುವ ಮೂಲಕ ನಮ್ಮ ವೈಯಕ್ತಿಕ ಸಾಮರ್ಥ್ಯಗಳನ್ನು ಮೀರಿದ ಸಾಮೂಹಿಕ ಪರಿಣಾಮಕ್ಕಾಗಿ ಅವಕಾಶಗಳನ್ನು ಸೃಷ್ಟಿಸಿದ್ದೇವೆ. ಸಂಗ್ರಹಿಸಲಾದ ಪ್ರತಿ ಹನಿ ರಕ್ತವೂ ನಿಯಮಿತ ರಕ್ತ ವರ್ಗಾವಣೆಗೆ ಒಳಗಾಗುವ ಪ್ರತಿ ಮಗುವಿನ ಭರವಸೆಯನ್ನು ಪ್ರತಿನಿಧಿಸುತ್ತದೆ.  ಈ ಅಭಿಯಾನವನ್ನು ಯಶಸ್ವಿಗೊಳ್ಳಲು ಕಾರಣರಾದಸಂಕಲ್ಪ್   ಇಂಡಿಯಾ ಫೌಂಡೇಶನ್‌ ಗೆ ಹಾಗು ಈ ಕಾರ್ಯದಲ್ಲಿ ಭಾಗಿಯಾದ ಎಲ್ಲರಿಗೂ ನಾವು ಋಣಿಯಾಗಿದ್ದೇವೆ “ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ಸಂಕಲ್ಪ್ ಇಂಡಿಯಾ ಫೌಂಡೇಶನ್‌ನ ಅಧ್ಯಕ್ಷ ರಜತ್ ಕುಮಾರ್ ಅಗರ್ವಾಲ್ ಮಾತನಾಡಿ, “ಸಕಾಲಿಕ ರಕ್ತವರ್ಗಾವಣೆಯನ್ನು ಅವಲಂಬಿಸಿ ಬದುಕುತ್ತಿರುವ 2,500 ಕ್ಕೂ ಹೆಚ್ಚು ಮಕ್ಕಳಿಗೆ, ಈ ಅಭಿಯಾನವು ರಕ್ತಕ್ಕಿಂತ ಹೆಚ್ಚಾಗಿ ಧೈರ್ಯ ಮತ್ತು ಭರವಸೆಯನ್ನು ನೀಡಿದೆ. ಈ ಮಕ್ಕಳಿಗೆ ಬೆಂಬಲ ನೀಡಿ ಅವರಿಗೆ ಭರವಸೆಯಾಗಿ ನಿಂತ ಸತ್ವ ಗ್ರೂಪ್‌ ಹಾಗೂ ಪ್ರತಿಯೊಬ್ಬ ದಾನಿಗಳಿಗೂ ಧನ್ಯವಾದ” ಎಂದು ಹೇಳಿದರು.

ಈ ಅಭಿಯಾನದ ಪ್ರತಿ ಹಂತದಲ್ಲೂ ಸುರಕ್ಷತೆ, ಸಹಭಾಗಿತ್ವ ಹಾಗೂ ಜಾಗೃತಿಯನ್ನು ಒಳಗೊಳ್ಳುವಂತೆ ರಚಿಸಲಾಗಿದೆ. ರಕ್ತದಾನಕ್ಕೂ ಮೊದಲು ದಾನಿಗಳಿಗೆ ಥಲಸ್ಸೇಮಿಯಾ ಕುರಿತು ಜಾಗೃತಿ, ಆರೋಗ್ಯ ತಪಾಸಣೆ ಹಾಗೂ ತಜ್ಞರ ನೆರವನ್ನು ನೀಡಲಾಗಿದೆ. ಈ ಕ್ರಮವು ಸುರಕ್ಷಿತ ವಾತಾವರಣದ ಜೊತೆಗೆ ಸಮುದಾಯ ಸಂಪರ್ಕ ಹಾಗೂ ಕಲಿಕೆಗೂ ಅವಕಾಶ ಕಲ್ಪಿಸಿದೆ. ಈ ಉಪಕ್ರಮವು ಸತ್ವ ಕ್ಯಾಂಪಸ್‌ನ ಎಲ್ಲಾ ಉದ್ಯೋಗಿಗಳಿಂದ ಉತ್ತಮ ಬೆಂಬಲ ಪಡೆದಿದೆ. ಈ ಮೂಲಕ ಕಾರ್ಪೋರೇಟ್‌ ಇಂಡಿಯಾದ ಸಾರ್ವಜನಿಕ ಆರೋಗ್ಯ ಸವಾಲುಗಳನ್ನು ಎದುರಿಸುವ ಕಾರ್ಯವನ್ನು ಒತ್ತಿ ಹೇಳಿದೆ. ಅಭಿಯಾನ ಮುಕ್ತಾಯಗೊಂಡಿದ್ದು ಸತ್ವ ಮತ್ತು ಸಂಕಲ್ಪ್ ಇಂಡಿಯಾ ಫೌಂಡೇಶನ್‌ ಅಭಿಯಾನದ ಯಶಸ್ಸಿಗೆ ಕಾರಣರಾದ ಎಲ್ಲಾ ರಕ್ತದಾನಿಗಳು, ಸ್ವಯಂ ಸೇವಕರು, ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಿದೆ.

ಇದನ್ನೂ ಓದಿ