May 12, 2026
Tuesday, May 12, 2026
spot_img

Summer Special | ಬಿಸಿಲಿನ ಬೇಗೆಯನ್ನು ತಣಿಸುವ ರಾಗಿ ಮಿಲ್ಕ್ ಶೇಕ್

ಬೇಸಿಗೆ ಬಿಸಿಲಲ್ಲಿ ದೇಹಕ್ಕೆ ತಂಪು ನೀಡೋದು ಮಾತ್ರ ಅಲ್ಲ, ಪೋಷಕಾಂಶವೂ ಕೊಡೋ ಪಾನೀಯ ಬೇಕಾ? ಹಾಗಿದ್ರೆ ರಾಗಿ ಮಿಲ್ಕ್‌ಶೇಕ್ ಕುಡಿಯಿರಿ. ರಾಗಿ ಅಂದರೆ ಕ್ಯಾಲ್ಸಿಯಂ, ಐರನ್ ತುಂಬಿರುವ ಆರೋಗ್ಯಕರ ಧಾನ್ಯ. ಇದನ್ನ ಮಿಲ್ಕ್‌ಶೇಕ್ ರೂಪದಲ್ಲಿ ತಯಾರಿಸಿಕೊಂಡ್ರೆ ಟೇಸ್ಟ್ ಜೊತೆಗೆ ಹೆಲ್ತ್ ಕೂಡ ಫ್ರೀ.

ಬೇಕಾಗುವ ಪದಾರ್ಥಗಳು

ರಾಗಿ ಹಿಟ್ಟು – 2 ಟೀ ಸ್ಪೂನ್
ಹಾಲು – 1 ಗ್ಲಾಸ್
ಬೆಲ್ಲ (ಅಥವಾ ಜೇನು) – ರುಚಿಗೆ ತಕ್ಕಷ್ಟು
ಏಲಕ್ಕಿ ಪುಡಿ – ಸ್ವಲ್ಪ
ಬಾದಾಮಿ – 4-5
ನೀರು – ಅಗತ್ಯವಿದ್ದಷ್ಟು

ಮಾಡುವ ವಿಧಾನ

ಮೊದಲು ರಾಗಿ ಹಿಟ್ಟನ್ನು ಸ್ವಲ್ಪ ನೀರಿನಲ್ಲಿ ಕಲಸಿ ಗಂಟುಗಳಿಲ್ಲದಂತೆ ಕಲಸಿಕೊಳ್ಳಿ. ಇದನ್ನು ಸ್ಟೌವ್ ಮೇಲೆ ಇಟ್ಟು ನಿಧಾನವಾಗಿ ಬೇಯಿಸಿ, ಗಟ್ಟಿಯಾಗುವವರೆಗೆ ಕಲಸಿ. ನಂತರ ತಣ್ಣಗಾಗಲು ಬಿಡಿ.

ಈಗ ಮಿಕ್ಸಿಯಲ್ಲಿ ಬೇಯಿಸಿದ ರಾಗಿ ಮಿಶ್ರಣ, ಹಾಲು, ಬೆಲ್ಲ, ಏಲಕ್ಕಿ ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿ.

ಬೇಕಾದರೆ ಐಸ್ ಕ್ಯೂಬ್ ಅಥವಾ ತಣ್ಣೀರು ಸೇರಿಸಿ ಮತ್ತೊಮ್ಮೆ ಮಿಕ್ಸ್ ಮಾಡಿ.

ಗ್ಲಾಸ್‌ಗೆ ಹಾಕಿ ಬಾದಾಮಿ ತುಂಡುಗಳಿಂದ ಅಲಂಕರಿಸಿ ಸರ್ವ್ ಮಾಡಿ.

ತಂಪಾದ, ಟೇಸ್ಟಿ ಮತ್ತು ಹೆಲ್ತಿಯಾಗಿರುವ ರಾಗಿ ಮಿಲ್ಕ್‌ಶೇಕ್ ನಿಮ್ಮ ಬೇಸಿಗೆ ದಿನಗಳಿಗೆ ಪರ್ಫೆಕ್ಟ್!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !