ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಣಕಾಸಿನ ಪ್ರತಿಯೊಂದು ವ್ಯವಹಾರಕ್ಕೂ ಪ್ಯಾನ್ (PAN) ಕಾರ್ಡ್ ಈಗ ಅನಿವಾರ್ಯ. ಆದರೆ, ಏಪ್ರಿಲ್ 1ರಿಂದ ಪ್ಯಾನ್ ಕಾರ್ಡ್ ಪಡೆಯುವ ಪ್ರಕ್ರಿಯೆಯಲ್ಲಿ ಆದಾಯ ತೆರಿಗೆ ಇಲಾಖೆಯು ಮಹತ್ವದ ಬದಲಾವಣೆಗಳನ್ನು ತರುತ್ತಿದೆ. ಈ ಹಿಂದೆ ಕೇವಲ ಆಧಾರ್ ಕಾರ್ಡ್ ನೀಡುವ ಮೂಲಕ ಸುಲಭವಾಗಿ ಪ್ಯಾನ್ ಪಡೆಯಬಹುದಿತ್ತು. ಆದರೆ ಇನ್ನು ಮುಂದೆ ಆ ಆಟ ನಡೆಯುವುದಿಲ್ಲ!
ಈಗಿನ ನಿಯಮದಂತೆ ಜನ್ಮ ದಿನಾಂಕದ ಪುರಾವೆಗೆ ಆಧಾರ್ ಕಾರ್ಡ್ ಸಾಕಾಗುತ್ತಿತ್ತು. ಆದರೆ ಏಪ್ರಿಲ್ 1ರ ನಂತರ, ಕೇವಲ ಆಧಾರ್ ನಂಬಿ ಪ್ಯಾನ್ ಕಾರ್ಡ್ ನೀಡಲಾಗುವುದಿಲ್ಲ. ಜನ್ಮ ದಿನಾಂಕದ ದೃಢೀಕರಣಕ್ಕಾಗಿ ನೀವು ಈ ಕೆಳಗಿನ ಯಾವುದಾದರೂ ಒಂದು ದಾಖಲೆಯನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ:
ಜನನ ಪ್ರಮಾಣಪತ್ರ
ಮತದಾರರ ಗುರುತಿನ ಚೀಟಿ
ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್
ಎಸ್.ಎಸ್.ಎಲ್.ಸಿ ಅಂಕಪಟ್ಟಿ
ಅಗತ್ಯವಿದ್ದರೆ ಸರ್ಕಾರಿ ಅಫಿಡವಿಟ್
ಹೊಸ ನಿಯಮದ ಪ್ರಕಾರ, ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಹೆಸರು ಹೇಗಿದೆಯೋ, ಪ್ಯಾನ್ ಅರ್ಜಿಯಲ್ಲೂ ಅಕ್ಷರಶಃ ಹಾಗೆಯೇ ಇರಬೇಕು. ಹೆಸರಿನ ಸ್ಪೆಲ್ಲಿಂಗ್ ಅಥವಾ ಇನಿಷಿಯಲ್ಸ್‌ನಲ್ಲಿ ಸಣ್ಣ ಬದಲಾವಣೆ ಇದ್ದರೂ ನಿಮ್ಮ ಅರ್ಜಿ ತಿರಸ್ಕೃತಗೊಳ್ಳುತ್ತದೆ.



