March 19, 2026
Thursday, March 19, 2026
spot_img

ಬೇಕಾಗಿರೋದು 44,000 ಸಿಲಿಂಡರ್, ಸಿಕ್ತಿರೋದು 9,000 ಸಿಲಿಂಡರ್‌ಗಳಷ್ಟೇ: ಕೆ. ಎಚ್. ಮುನಿಯಪ್ಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಭಾರೀ ಕೊರತೆ ಎದುರಾಗಿದ್ದು, ಹೋಟೆಲ್ ಹಾಗೂ ಇತರ ವಾಣಿಜ್ಯ ವಲಯಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಬಗ್ಗೆ ಮಾಹಿತಿ ನೀಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಎಚ್. ಮುನಿಯಪ್ಪ, ದಿನಕ್ಕೆ ಸುಮಾರು 44,000 ಸಿಲಿಂಡರ್ ಅಗತ್ಯವಿದ್ದರೂ ಕೇವಲ 9,000 ಸಿಲಿಂಡರ್‌ಗಳಷ್ಟೇ ಲಭ್ಯವಿವೆ ಎಂದು ತಿಳಿಸಿದ್ದಾರೆ.

ಕೇಂದ್ರದಿಂದ ಕೇವಲ 20 ಶೇಕಡಾ ಪೂರೈಕೆ ಮಾತ್ರ ಸಿಗುತ್ತಿರುವುದರಿಂದ ಈ ಕೊರತೆ ಉಂಟಾಗಿದೆ. ಆದರೆ ಗೃಹ ಬಳಕೆಯ ಎಲ್‌ಪಿಜಿ ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಿಲ್ಲದೆ ದಿನನಿತ್ಯದ ಬೇಡಿಕೆ ಪೂರೈಸಲಾಗುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ:

ಲಭ್ಯವಿರುವ ಸಿಲಿಂಡರ್‌ಗಳನ್ನು ಆದ್ಯತೆಯ ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತಿದ್ದು, ಆಸ್ಪತ್ರೆಗಳು, ಹಾಸ್ಟೆಲ್‌ಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ನೀಡಲಾಗಿದೆ. ವಿಮಾನ ನಿಲ್ದಾಣ, ರೈಲು ನಿಲ್ದಾಣ ಮತ್ತು ಸರ್ಕಾರಿ ಕ್ಯಾಂಟೀನ್‌ಗಳಿಗೂ ಸಿಲಿಂಡರ್ ವಿತರಿಸಲಾಗಿದೆ.

ಹೋಟೆಲ್‌ಗಳಿಗೆ ಕೇವಲ 1,000 ಸಿಲಿಂಡರ್‌ಗಳು ಮಾತ್ರ ಸಿಗುತ್ತಿರುವುದರಿಂದ, ತಾತ್ಕಾಲಿಕವಾಗಿ ವಿದ್ಯುತ್ ಸ್ಟೌವ್ ಬಳಸುವಂತೆ ಸೂಚಿಸಲಾಗಿದೆ. ಇರಾನ್‌ನಿಂದ ಎಲ್‌ಪಿಜಿ ಸಾಗಣೆ ಹಡಗುಗಳು ಬಂದ ಬಳಿಕ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ವ್ಯಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !