ಬೆಳಗಿನ ಉಪಹಾರಕ್ಕೆ ದೋಸೆ ಅಥವಾ ಚಪಾತಿ ಜೊತೆ ಹೊಸ ರುಚಿ ಬೇಕೆಂದರೆ ಅಲಸಂದೆ ಕಾಳಿನ ಪಲ್ಯ ಒಳ್ಳೆಯ ಆಯ್ಕೆ. ಒಂದ್ಸಲ ತಿಂದ್ರೆ ಪದೇ ಪದೇ ಮಾಡ್ತೀರ.
ಬೇಕಾಗುವ ಪದಾರ್ಥಗಳು:
ಅಲಸಂದೆ ಕಾಳು – 1 ಕಪ್ (ನೆನೆಸಿ ಬೇಯಿಸಿದ್ದು)
ಈರುಳ್ಳಿ – 1
ಟೊಮ್ಯಾಟೊ – 1
ಹಸಿಮೆಣಸು – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಸಾಸಿವೆ – 1/2 ಟೀ ಸ್ಪೂನ್
ಜೀರಿಗೆ – 1/2 ಟೀ ಸ್ಪೂನ್
ಅರಿಶಿನ – ಚಿಟಿಕೆ
ಕೆಂಪು ಮೆಣಸಿನ ಪುಡಿ – 1/2 ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಉಪ್ಪು – ರುಚಿಗೆ
ತೆಂಗಿನ ತುರಿ – 2 ಟೇಬಲ್ ಸ್ಪೂನ್
ಎಣ್ಣೆ – 2 ಟೇಬಲ್ ಸ್ಪೂನ್
ಕರಿಬೇವು, ಕೊತ್ತಂಬರಿ – ಸ್ವಲ್ಪ
ಮಾಡುವ ವಿಧಾನ:
ಅಲಸಂದೆ ಕಾಳನ್ನು 6-8 ಗಂಟೆ ನೆನೆಸಿ, ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಿ.
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ, ಕರಿಬೇವು, ಹಸಿಮೆಣಸು ಹಾಕಿ, ನಂತರ ಈರುಳ್ಳಿ ಹಾಕಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಈಗ ಟೊಮ್ಯಾಟೊ ಸೇರಿಸಿ ಮೃದುವಾಗುವವರೆಗೆ ಬೇಯಿಸಿ.
ಅರಿಶಿನ, ಮೆಣಸಿನ ಪುಡಿ, ಧನಿಯಾ ಪುಡಿ ಹಾಕಿ ಕಲಸಿ. ಈಗ ಬೇಯಿಸಿದ ಕಾಳು ಮತ್ತು ಸ್ವಲ್ಪ ನೀರು ಹಾಕಿ 5 ನಿಮಿಷ ಕುದಿಯಲು ಬಿಡಿ. ಕೊನೆಗೆ ತೆಂಗಿನ ತುರಿ, ಕೊತ್ತಂಬರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.



