March 21, 2026
Saturday, March 21, 2026
spot_img

ಇನ್ನೂ ಆರ್​ಸಿಬಿ ಕ್ಯಾಂಪ್ ಸೇರದ ಸ್ಟಾರ್ ವೇಗಿ: ಈ ಬಾರಿ ಐಪಿಎಲ್ ನಿಂದಲ್ಲೂ ಗೇಟ್ ಪಾಸ್?

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇನ್ನೂ ಆರ್​ಸಿಬಿ ಕ್ಯಾಂಪ್ ಸೇರದ ಸ್ಟಾರ್ ವೇಗಿ: ಈ ಬಾರಿ ಐಪಿಎಲ್ ನಿಂದಲ್ಲೂ ಗೇಟ್ ಪಾಸ್?
ಐಪಿಎಲ್ ಟೂರ್ನಿ ಆರಂಭಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿದ್ದು, ಮೊದಲ ಪಂದ್ಯಕ್ಕೆ ಹೈದರಾಬಾದ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮುಖಾಮುಖಿಯಾಗುತ್ತಿದೆ.

ಈಗಾಗಲೇ ಬೆಂಗಳೂರಿನಲ್ಲಿ ಕೊಹ್ಲಿ, ರಜತ್‌ ಪಾಟಿದಾರ್‌ ಸಹಿತ ಆರ್ ಸಿಬಿ ಆಟಗಾರರರು ಭರ್ಜರಿ ತಯಾರಿ ನಡೆಸುತ್ತಿದ್ದು, ಆದರೆ ಪ್ರಮುಖ ವೇಗಿ ಯಶ್‌ ದಯಾಳ್‌ ಇನ್ನೂ ತಂಡಕ್ಕೆ ಸೇರ್ಪಡೆಯಾಗಿಲ್ಲ.

ಯಶ್‌ ದಯಾಳ್‌ ವಿರುದ್ಧ ಎರಡು ಅತ್ಯಾಚಾರದ ಆರೋಪ ಕೇಳಿಬಂದಿದ್ದು, ಇದರ ಪರಿಣಾಮ ಕಾನೂನು ತೊಡಕಿನಲ್ಲಿ ಸಿಲುಕಿಗೊಂಡಿದ್ದಾರೆ. ಉತ್ತರ ಪ್ರದೇಶದ ಘಾಜಿಯಾಬಾದ್‌ ನಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಮತ್ತೊಂದು ಜೈಪುರದಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಆದಾಗ್ಯೂ ಆರ್​ಸಿಬಿ ದಯಾಳ್​ ಅವರನ್ನು 5 ಕೋಟಿ ರೂ.ಗೆ ತಂಡದಲ್ಲಿ ಉಳಿಸಿಕೊಂಡಿದೆ. ಆದರೆ ಇನ್ನೂ ತಂಡಕ್ಕೆ ಸೇರದೇ ಇರುವುದು ಆನುಮಾನಕ್ಕೆ ಕಾರಣವಾಗಿದೆ.

ಇದರ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ಆರ್ ಸಿಬಿ ತಂಡದ ಬಸ್ ನ ಫೋಟೋ ವೈರಲ್ ಆಗಿದ್ದು, ಅದ್ರಲ್ಲಿ ಅಂಟಿಸಲಾದ ಆಟಗಾರ ಸ್ಟಿಕ್ಕರ್​ನಲ್ಲೂ ದಯಾಳ್ ಫೋಟೋ ಇಲ್ಲ. ಹೀಗಾಗಿ ಈ ಬಾರಿ ಐಪಿಎಲ್ ಆಡುತ್ತಾರಾ ಇಲ್ಲವೇ ಎನ್ನುವುದು ಅನುಮಾನ ಮೂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !