June 6, 2026
Saturday, June 6, 2026
spot_img

ಕೆಕೆಆರ್‌ ಫ್ಯಾನ್ಸ್ ಗೆ ಬ್ಯಾಡ್ ನ್ಯೂಸ್: ರಾಣಾ ಬಳಿಕ ಮತ್ತೋರ್ವ ವೇಗಿ ಟೂರ್ನಿಯಿಂದಲೇ ಔಟ್?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಬಾಕಿ ಉಳಿದಿದ್ದು, ಆಟಗಾರರರು ಭರ್ಜರಿ ತಾಲೀಮು ನಡೆಸುತ್ತಿದ್ದಾರೆ. ಇದರ ನಡುವೆ ಈ ಬಾರಿ ಆಟಗಾರರ ಇಂಜುರಿ ಸಮಸ್ಯೆಯೇ ಹೆಚ್ಚು ಸದ್ದು ಮಾಡುತ್ತಿದೆ. ವಿವಿಧ ತಂಡಗಳಿಂದ ಹಲವು ಆಟಗಾರರರು ಟೂರ್ನಿಯಿಂದಲೇ ಹೊರ ಹೋಗಿದ್ದು, ಇದೀಗ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೂ ಈ ಅಂತಕ ಎದುರಾಗಿದೆ.

ಕೆಕೆಆರ್ ತಂಡದ ಪ್ರಮುಖ ವೇಗದ ಬೌಲರ್ ಹರ್ಷಿತ್ ರಾಣಾ ಈಗಾಗಲೇ ಟೂರ್ನಿಯಿಂದಲೇ ಔಟ್ ಆಗಿದ್ದು, ಇದೀಗ ಆಕಾಶ್ ದೀಪ್ ಕೂಡ ಅದೇ ಹಾದಿಯಲ್ಲಿದ್ದಾರೆ.

ಸದ್ಯ ಆಕಾಶ್ ದೀಪ್ ಬೆಂಗಳೂರಿನ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದೇ ವೇಳೆ ಪಂದ್ಯ ಶುರುವಾಗುವ ಸಮಯ ಪೂರ್ಣ ಪ್ರಮಾಣದಲ್ಲಿ ಚೇತರಿಕೆಯಾಗದೇ ಹೊದ್ದಲ್ಲಿ ಕೆಕೆಆರ್ ಬೌಲಿಂಗ್ ವಿಭಾಗಕ್ಕೆ ದೊಡ್ಡ ಹೊಡೆತವಾಗಲಿದೆ.

ಒಂದೆಡೆ ಮುಸ್ತಫಿಜುರ್ ರಹಮಾನ್ ಗೆ ಬಿಸಿಸಿಐ ನಿಷೇಧ ಹೇರಿದ್ದು, ಮತ್ತೊಂದೆಡೆ ಮೊಣಕಾಲಿನ ಗಾಯದಿಂದಾಗಿ ಹರ್ಷಿತ್ ರಾಣಾ ಕೂಡ ಟೀಮ್ ಯಿಂದಲೇ ಹೊರಹೋಗಿದ್ದು, ಕೆಕೆಆರ್ ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಇದರ ಜೊತೆಗೆ ಇದೀಗ 1 ಕೋಟಿ ರೂಪಾಯಿ ಮೂಲ ಬೆಲೆಗೆ ಖರೀದಿಸಿದ್ದ ಆಕಾಶ್‌ದೀಪ್ ಗಾಯದ ಸಮಸ್ಯೆದೊಡ್ಡ ಹಿನ್ನಡೆಯಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಾವ ರೀತಿ ತಂಡ ಸಜ್ಜಾಗುತ್ತದೆ ಎಂದು ಕಾದು ನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !