March 25, 2026
Wednesday, March 25, 2026
spot_img

ಹಾರ್ಮುಜ್‌ ಬಿಕ್ಕಟ್ಟಿಗೆ ರಷ್ಯಾ ತೈಲವೇ ಮದ್ದು: 6 ಕೋಟಿ ಬ್ಯಾರಲ್ ತೈಲ ಖರೀದಿಗೆ ಭಾರತ ಮಾಸ್ಟರ್ ಪ್ಲಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಬಿಕ್ಕಟ್ಟು ಇನ್ನೂ ಬಗೆಹರಿಯದ ಕಾರಣ, ಭಾರತ ತನ್ನ ಇಂಧನ ಭದ್ರತೆಗಾಗಿ ಮತ್ತೆ ರಷ್ಯಾದ ಮೊರೆ ಹೋಗಿದೆ. ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಬಾರದು ಎಂಬ ಮುನ್ನೆಚ್ಚರಿಕೆಯಿಂದ, ಭಾರತ ಮುಂದಿನ ತಿಂಗಳಿಗಾಗಿ ರಷ್ಯಾದಿಂದ ಬರೋಬ್ಬರಿ 6 ಕೋಟಿ ಬ್ಯಾರಲ್ ಕಚ್ಚಾ ತೈಲವನ್ನು ಬುಕ್ ಮಾಡಿದೆ.

ಕಳೆದ ಫೆಬ್ರವರಿಗೆ ಹೋಲಿಸಿದರೆ ಈ ಬಾರಿ ಭಾರತ ದುಪ್ಪಟ್ಟು ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಬ್ರೆಂಟ್ ಕಚ್ಚಾ ತೈಲಕ್ಕಿಂತ ಪ್ರತಿ ಬ್ಯಾರಲ್‌ಗೆ ಸುಮಾರು 5 ರಿಂದ 15 ರಷ್ಟು ಪ್ರೀಮಿಯಂ ದರದಲ್ಲಿ ಈ ವ್ಯವಹಾರ ನಡೆದಿದೆ.

ಹಾರ್ಮುಜ್ ಜಲಸಂಧಿಯ ಸಮಸ್ಯೆಯಿಂದ ತೈಲ ಕೊರತೆಯಾಗಬಹುದು ಎಂಬ ಆತಂಕವಿತ್ತು. ಆದರೆ ಈ ಬೃಹತ್ ಆಮದಿನಿಂದ ದೇಶದಲ್ಲಿ ತೈಲದ ಕೊರತೆ ನೀಗಲಿದೆ ಎಂದು ಅಂದಾಜಿಸಲಾಗಿದೆ.

ಈಗಾಗಲೇ ರಿಲಯನ್ಸ್ ಸಂಸ್ಥೆಯು ಇರಾನ್‌ನಿಂದ 50 ಲಕ್ಷ ಬ್ಯಾರಲ್ ತೈಲ ಖರೀದಿಸಿದ ಬೆನ್ನಲ್ಲೇ, ಸರ್ಕಾರದ ಈ ಬೃಹತ್ ನಿರ್ಧಾರವು ದೇಶದ ಆರ್ಥಿಕತೆಗೆ ಆನೆಬಲ ನೀಡಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !